ಕುಂದಾಪುರ: ಜುಲೈ 20ರಂದು ಲಗೋರಿ ಗ್ರಾಮೀಣ ಕ್ರೀಡಾ ಸಡಗರ – ಪೂರ್ವಭಾವಿ ಸಭೆ
ಕುಂದಾಪುರ: ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯ ಅಂಗವಾಗಿ ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್ ವತಿಯಿಂದ ಪ್ರತೀ ವರ್ಷ ಕುಂದಾಪುರದಲ್ಲಿ ಗ್ರಾಮಿಣ ಕ್ರೀಡಾಕೂಟಗಳು ನಡೆಯುತ್ತಿದ್ದು, ಈ ವರ್ಷ ಜುಲೈ 20ರಂದು ಕುಂದಾಪುರ ಬೋರ್ಡ್ ಹೈಸ್ಕೂಲಿನ ಮೈದಾನದಲ್ಲಿ “ಲಗೋರಿ” ಗ್ರಾಮೀಣ ಕ್ರೀಡಾಕೂಟ ನಡೆಯಲಿದೆ ಎಂದು ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್ ಅಧ್ಯಕ್ಷ ಬಿ. ಕಿಶೋರ್ ಕುಮಾರ್ ಹೇಳಿದ್ದಾರೆ.

ಕಲಾಕ್ಷೇತ್ರ ಕಛೇರಿಯ ಪ್ರಕಾಶಾಂಗಣದಲ್ಲಿ ಕರೆಯಲಾದ ’ಲಗೋರಿ’ ಗ್ರಾಮೀಣ ಕ್ರೀಡಾ ಕೂಟ ಕಾರ್ಯಕ್ರದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಜುಲೈ 20 ರಂದು ಕುಂದಾಪುರ ಬೋರ್ಡ್ ಹೈಸ್ಕೂಲಿನ ಮೈದಾನದಲ್ಲಿ ಬೆಳಿಗ್ಗೆ 9 ಗಂಟೆಯಿಂದ ಈ ಕ್ರೀಡಾಕೂಟವು ಆರಂಭವಾಗಲಿದೆ. ಕ್ರೀಡಾಕೂಟವು ಯಾವ ಕ್ರೀಡೆಗಳನ್ನು ಒಳಗೊಂಡಿದೆ ಹಾಗೂ ಅದರ ವಿವಿರಗಳನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂದು ಅವರು ಹೇಳಿದರು.
ದೈಹಿಕ ಶಿಕ್ಷಕರಾದ ಅರುಣ್ ಶೆಟ್ಟಿ, ಚಂದ್ರಶೇಖರ ಬೀಜಾಡಿ, ರಾಜಕೀಯ ಮುಂದಾಳು ವಿಕಾಸ್ ಹೆಗ್ಡೆ, ಸಾಹಿತ್ಯ ಪರಿಷತ್ತಿನ ಸುಬ್ರಹ್ಮಣ್ಯ ಶೆಟ್ಟಿ, ಲಯನ್ಸ್ ರಾಜೀವ ಕೋಟ್ಯಾನ್, ರಮಾನಂದ ಗಾಣಿಗ ಮತ್ತು ಕ್ರೀಡಾ ಪಟು ಪ್ರದೀಪ್‌ಚಂದ್ರ ಶೆಟ್ಟಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. ಈ ಸಂದರ್ಭ ಕಲಾಕ್ಷೇತ್ರ ಸಂಸ್ಥೆಯ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು, ಕ್ರೀಡಾಪಟುಗಳು, ರಾಜಕೀಯ ಧುರೀಣರು ಭಾಗವಹಿಸಿದ್ದರು.
