BlogCulturalEducationHighlightsHuman storiesLifestyleLocal newsOthersTop StoriesTrending

ಸಿದ್ದಾಪುರ: ಸರಸ್ವತಿ ವಿದ್ಯಾಲಯದಲ್ಲಿ ಅಕ್ಷರಭ್ಯಾಸ

Aware others:

ಕುಂದಾಪುರ: ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಎಲ್ಲ ಕಾರ್ಯಕ್ರಮಗಳಿಗೂ ಒಂದು ಅರ್ಥ ಹಾಗು ವೈಜ್ಞಾನಿಕ ಹಿನ್ನೆಲೆಗಳಿರುತ್ತವೆ. ಅದರ ಆಧಾರದ ಮೇಲೆಯೇ ಮಕ್ಕಳಿಗೆ ಶೋಡಷ ಕರ್ಮಗಳನ್ನು ವಿಧಿವತ್ತಾಗಿ ಮಾಡಲಾಗುತ್ತದೆ. ಮಗುವಿನ ಕಲಿಕೆಯ ಮೊದಲ ಹೆಜ್ಜೆಯಲ್ಲಿ ದೇವಿ ಸರಸ್ವತಿಯನ್ನು ಪೂಜಿಸಿ, ಅಕ್ಷರಭ್ಯಾಸ ದ ಮೂಲಕ ಮಕ್ಕಳ ಕಲಿಕೆಯನ್ನು ಆರಂಭಿಸುವುದು ನಮ್ಮ ಪ್ರತೀತಿ ಎಂದು ಸುಮುಖ ಎಜುಕೇಶನಲ್ ಟ್ರಸ್ಟ್ ನ ಅಧ್ಯಕ್ಷ ಬಿಎಸ್ ಸುರೇಶ್ ಶೆಟ್ಟಿ ಹೇಳಿದರು.

ಅವರು ಶುಕ್ರವಾರ ಸಿದ್ದಾಪುರದ ಸರಸ್ವತಿ ವಿದ್ಯಾಲಯದಲ್ಲಿ ವಿಧ್ವನ್ ಸೂರಜ್ ಆಚಾರ್ಯನೇತೃತ್ವದಲ್ಲಿ ಶಿಶು ಕೇಂದ್ರದ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾದ ಅಕ್ಷರಭ್ಯಾಸ ಕಾರ್ಯಕ್ರಮವನ್ನು ಆರಂಭಿಸಿ ಮಾತನಾಡಿದರು. 

ಈ ಸಂದರ್ಭ ಸುಮುಖ ಎಜುಕೇಶನಲ್ ಟ್ರಸ್ಟ್ ನ ಕಾರ್ಯದರ್ಶಿ ಯು ಪಾಂಡುರಂಗ ಪಡಿಯಾರ್, ಜ್ಞಾನ ಸರಸ್ವತಿ ಪಿಯು ಕಾಲೇಜಿನ ಪ್ರಾಂಶುಪಾಲ ಅಮರೇಶ್ ಹೆಗ್ಡೆ, ಉಪ ಪ್ರಾಂಶುಪಾಲ ಹರ್ಷ ಶೆಟ್ಟಿ.

ಸರಸ್ವತಿ ವಿದ್ಯಾಲಯದ ಮುಖ್ಯೋಪಾಧ್ಯಾಯಿನಿ ಶ್ವೇತಾ, ಶಿಶುಮಂದಿರದ ಶಿಕ್ಷಕಿಯರಾದ ಸವಿತಾ, ಗೀತಾ ಹಾಗು ರಮ್ಯಾ. ಆರ್. ಭಟ್ ಉಪಸ್ಥಿತರಿದ್ದರು. ವಿದ್ಯಾರ್ಥಿ ಪೋಷಕರು ಹಾಜರಿದ್ದರು.


Aware others:

Leave a Reply

Your email address will not be published. Required fields are marked *

error: Content is protected !!