BlogEconomyEducationFashionGovernmentHighlightsHuman storiesLifestyleLocal newsOthersPoliticsState newsTop StoriesTrending

ಕುಂದಾಪುರ: ಚಿತ್ತೂರಿನಲ್ಲಿ 134ನೇ ಅಂಬೇಡ್ಕರ್ ಜನ್ಮ ದಿನಾಚರಣೆ, ಸಾಧಕರಿಗೆ ಸನ್ಮಾನ

Aware others:

ಕುಂದಾಪುರ: ಕರ್ನಾಟಕ ದಲಿತ ಸಂಘರ್ಷ ಸಮಿತಿ( ರಿ)ಅಂಬೇಡ್ಕರ್ ವಾದ ತಾಲೂಕು ಸಮಿತಿ ಕುಂದಾಪುರ ಇದರ ಚಿತ್ತೂರು ಗ್ರಾಮ ಶಾಖೆ ಎರಡನೇ ವರ್ಷದ ವಾರ್ಷಿಕೋತ್ಸವ ಮತ್ತು ಭಾರತ ರತ್ನ ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರರ 134ನೇ ಜನ್ಮದಿನಚಾರಣೆಯನ್ನು ಭಾನುವಾರ ಮಾರಣಕಟ್ಟೆ ಡಾ ಬಿ ಆರ್ ಅಂಬೇಡ್ಕರ್ ಭವನದಲ್ಲಿ ಆಚರಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ,  ಅಂಬೇಡ್ಕರ್ ರಚಿಸಿದ ಸಂವಿಧಾನ ನಮ್ಮ ದೇಶಕ್ಕೆ ವರದಾನ.  ಸರ್ವರಿಗೂ ಸಮಪಾಲು ಸಮಬಾಳು ಎಂಬ ಪರಿಕಲ್ಪನೆಯ ಸಂವಿಧಾನ ಬಾಬಾ ಸಾಹೇಬ್ ಅಂಬೇಡ್ಕರರಿಂದ ಮಾತ್ರ ರಚಿಸಲು ಸಾದ್ಯವಾಗಿದೆ ಇಂತಹ ಮಹಾನ್ ಗ್ರಂಥ ಪ್ರತಿಯೊಬ್ಬ ಭಾರತೀಯರ ಜೀವನಾಡಿಯಾಗಿದೆ ಸಂವಿಧಾನವನ್ನು ಗೌರವಿಸುವುದು ನಮ್ಮಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.  

ಕರ್ನಾಟಕ ದಲಿತ ಸಂಘರ್ಷ ಸಮಿತಿ( ರಿ) ಅಂಬೇಡ್ಕರ್ ವಾದದ ಜಿಲ್ಲಾ ಪ್ರದಾನ ಸಂಚಾಲಕ ಟಿ ಮಂಜುನಾಥ ಗಿಳಿಯಾರು ಮಾತನಾಡಿ, ನಮ್ಮ ಸಂಘಟನೆಯು ಜಿಲ್ಲೆಯಾದ್ಯಂತ ಶೋಶಿತರ ಪರ ಗಟ್ಟಿ ದ್ವನಿಯಾಗಿ  ಬಾಬಾ ಸಾಹೇಬರ ತತ್ವ ಸಿದ್ದಾಂತಗಳಿಗೆ ಕಿಂಚಿತ್ತೂ ಚ್ಯುತಿ ಬಾರದಹಾಗೆ  ಕಾರ್ಯನಿರ್ವಹಿಸುತ್ತಿದೆ ಎಂದರು.  ಕುಂದಾಪುರ ತಾಲೂಕು ಸಂಚಾಲಕ ಕೆ ಸಿ ರಾಜು ಬೆಟ್ಟಿನಮನೆ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭ  ಸಮುದಾಯದ ಸಾಧಕರಾದ  ಹಿರಿಯ ಹೋರಾಟಗಾರ ರವಿಚಂದ್ರನ್,  ಊರ್ಮನೆ ಟೀಮ್ ಕೋರ್ಗಿ  ಇದರ ಸೂರ ನೈಕಂಬ್ಳಿ  ಇವರನ್ನು ಸನ್ಮಾನಿಸಲಾಯಿತು. ಬೈಂದೂರು ಮಾಜಿ ಶಾಸಕ ಗೋಪಾಲ ಪೂಜಾರಿ,  ಪರಿಸರವಾದಿ ಡಾ ಅಥುಲ್ ಕಮಾರ ಶೆಟ್ಟಿ, ವನ ದುರ್ಗೆ ದೇವಸ್ಥಾನದ ಆಡಳಿತ ಮುಕ್ಕೇಸ್ಥರಾದ ವಂಡಬಳ್ಳಿ ಜಯರಾಮ ಶೆಟ್ಟಿ, ಚಿತ್ತೂರು ಗ್ರಾಮ ಪಂಚಾಯತ್ ಅದ್ಯಕ್ಷ ರವಿರಾಜ್ ಶೆಟ್ಟಿ ಅಂಬೇಡ್ಕರ್ ಭಾವ ಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.

ಜಿಲ್ಲಾ ಸಂಚಾಲಕ ಸುರೇಶ್ ಹಕ್ಲಾಡಿ, ಮಂಜುನಾಥ ನಾಗೂರು, ಜಿಲ್ಲಾ ಮಹಿಳಾ ಸಂಘಟನಾ ಸಂಚಾಲಕಿ ಗೀತಾ ಸುರೇಶ್ ಕುಮಾರ್, ಜಿಲ್ಲಾ ಸಂಘಟನ ಸಂಚಾಲಕ ಸಮಿತಿ ಸದಸ್ಯರು ಸುರೇಶ್ ಕುಮಾರ್, ಭಾಸ್ಕರ ಕೆರ್ಗಾಲ್  ಬಾರ್ಕೂರು, ಗೋಪಾಲಕೃಷ್ಣ ನಾಡ, ತಾಲೂಕು ಸಂಘಟನ ಸಂಚಾಲರುಗಳಾದ ಉದಯ್ ಕುಮಾರ್ ಕೋಳೂರ, ಭಾಸ್ಕರ ಕುಂಟೋಳಿ, ಅಶೋಕ ಮೋಳಹಳ್ಳಿ, ಚಂದ್ರ ಊಳ್ಳೂರು, ಸತೀಶ್ ರಾಮನಗರ, ಪ್ರಶಾಂತ್ ಹೈಕಾಡಿ, ಮಹಿಳಾ ಸಂಘಟನ ಸಂಚಾಲಕಿ ಭವಾನಿ, ನಾಗರತ್ ಭಾಸ್ಕರ್ ನಾಯ್ಕ ಸಿದ್ದಾಪುರ, ಸುಶೀಲಾ (ಪಂಚಾಯತ್ ಉಪಾದ್ಯಕ್ಷೆ ), ಸತೀಶ್ ಯಡ್ತರೆ, ರಾಜು ಮೊಳಹಳ್ಳಿ , ಅಣ್ಣಪ್ಪ ಆಲೂರು,  ಉಮೇಶ್ ಅಮಾಸ್ ಬೈಲ್,  ಉಮೇಶ್ ಹಿಜಾಣ ಹಾಗೂ ಚಿತ್ತೂರು ಗ್ರಾಮ ಶಾಖೆಯ ಸರ್ವಸದಸ್ಯರು ಮಹಿಳೆಯರು ಉಪಸ್ಥಿರಿದ್ದರು.  ಆರ್ ಪಿ ಪವನಕುಮಾರ್ ಹೋರಾಟದ ಗೀತೆ ಹಾಡಿದರು, ಶ್ರೀನಿಧಿ ನೈಕಂಬ್ಳಿ ಸಂವಿಧಾನ ಪೀಟಿಕೆ ವಾಚಿಸಿದಳು. ಚಂದನ ಕುಂಟೋಳಿ ಸ್ವಾಗತಿಸಿದರು. ಚೈತ್ರ ಸತೀಶ್ ಯಡ್ತರೆ, ಧೀಕ್ಷತ್ ಮೊಳಹಳ್ಳಿ, ನಿರೂಪಿಸಿದರು. ತಾಲೂಕು ಸಂಘಟನಾ ಸಂಚಾಲಕ ಶ್ರೀಕಾಂತ್ ಹಿಜಾಣ ವಂದಿಸಿದರು.


Aware others:

Leave a Reply

Your email address will not be published. Required fields are marked *

error: Content is protected !!