AccidentBlogCrime newsHighlightsHuman storiesLifestyleLocal newsOthersTop StoriesTrending

ವಕ್ವಾಡಿ: ಸೈಕಲ್ ಗೆ ಓಮ್ನಿ ಡಿಕ್ಕಿ – ಸವಾರ ಗಂಭೀರ

Aware others:

ಕುಂದಾಪುರ: ಸೈಕಲ್ ಗೆ ಓಮ್ನಿ ಕಾರು ಡಿಕ್ಕಿಯಾದ ಪರಿಣಾಮ ಸೈಕಲ್ ಸವಾರ ಗಂಭೀರ ಗಾಯಗೊಂಡ ಘಟನೆ ತಾಲೂಕಿನ ವಕ್ವಾಡಿ ಎಂಬಲ್ಲಿ ನಡೆದಿದೆ. ಸೈಕಲ್ ಸವಾರ ಗಣಪತಿ ಹೆಗ್ಡೆ (58) ಎಂಬುವರೇ ಗಂಭೀರ ಗಾಯಗೊಂಡವರು.

ಗಣಪತಿ ಹೆಗ್ಡೆ ಬುಧವಾರ ಸಂಜೆ ಕೂಲಿ ಕೆಲಸ ಮಾಡಿ ಸೈಕಲ್ ನಲ್ಲಿ ಮನೆಗೆ ಬರುತ್ತಿದ್ದರು. ಇದೇ ಸಂದರ್ಭ ವಕ್ವಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ರಸ್ತೆಯ ಹತ್ತಿರದ ರಸ್ತೆಯಲ್ಲಿ ನಾಗೇಶ್ ಶೇಟ್ ಎಂಬುವವರು ಓಮ್ನಿ ಕಾರು ಚಲಾಯಿಸಿಕೊಂಡು ಬಂದು ಸೈಕಲ್ ಗೆ ಡಿಕ್ಕಿ ಹೊಡೆದಿದ್ದಾರೆ. ಘಟನೆಯಿಂದ ಗಂಭೀರ ಗಾಯಗೊಂಡಿರುವ ಗಣಪತಿ ಹೆಗ್ಡೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಓಮ್ನಿ ಮುಂಭಾಗ ನುಜ್ಜು ಗುಜ್ಜಾಗಿದೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Aware others:

Leave a Reply

Your email address will not be published. Required fields are marked *

error: Content is protected !!