BlogCulturalEconomyEducationEntertainmentFashionHighlightsHuman storiesLifestyleLocal newsOthersState newsSuccess storiesTop StoriesTrending

ಎಪ್ರಿಲ್ 13:  ಬಾಳೆಬೆಟ್ಟು ಫ್ರೆಂಡ್ಸ್ ಹಾಗೂ ಭಗತ್ ಸಿಂಗ್ ಯುವ ವೇದಿಕೆ ಕೋಟ ವತಿಯಿಂದ ಎಂಟನೇ ವರ್ಷದ ಸ್ಪರ್ಶ ಕಾರ್ಯಕ್ರಮ

Aware others:

ಕೋಟ: ನಾಳೆ ದಿನಾಂಕ ಎಪ್ರಿಲ್ 13ರ ಭಾನುವಾರ ಸಂಜೆ ಕೋಟದ ಮಣೂರಿನಲ್ಲಿ ಬಾಳೆಬೆಟ್ಟು ಫ್ರೆಂಡ್ಸ್ ಬಾಳೆಬೆಟ್ಟು ಹಾಗೂ ಭಗತ್ ಸಿಂಗ್ ಯುವ ವೇದಿಕೆ ಕೋಟ ಇವರ ವತಿಯಿಂದ ಎಂಟನೇ ವರ್ಷದ ಭಾವ ಬಿಂಬಗಳ ಉತ್ಕರ್ಷ “ಸ್ಪರ್ಶ” ಕಾರ್ಯಕ್ರಮ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಕೋಟದ ಸುರೇಶ್ ಬಂಗೇರ ಅವರಿಗೆ ‘ನಡುತಿಟ್ಟಿನ ತುರಾಯಿ’ ಹುಟ್ಟೂರ ಸನ್ಮಾನ ನಡೆಯಲಿದೆ. ಜಿಲ್ಲಾ ರಾಜ್ಯೋತ್ಸರ ಪ್ರಶಸ್ತಿ ಪುರಸ್ಕೃತರು ಸಾಹಿತಿ  ಶಂಕರ್ ಮಂಜೇಶ್ವರ, ತಾಂತ್ರಿಕ ಶಿಲ್ಪಿ ಹಾಗೂ ಧಾರ್ಮಿಕ ಮುಖಂಡ ಆನಂದ ದೇವಾಡಿಗ, ಹಿರಿಯ ಬಡಗಿ ಮಹಾಬಲ ಆಚಾರ್, ಹಿರಿಯ ಕೃಷಿಕ ಶೇಖರ್ ಶೆಟ್ಟಿ, ಶುದ್ದಾಚಾರಗಳ ಪರಿಚಾರಕಿ ಲಕ್ಷ್ಮೀ ಮಡಿವಾಳ, ರಂಗ ನಟ, ಸಾಂಸ್ಕೃತಿಕ ಚಿಂತಕ ಚಂದ್ರಶೇಖರ ಆಚಾರ್, ವಾದ್ಯಗೋಷ್ಠಿಯ ನುರಿತ ವಾದಕ ಚಾರ್ಜ್ ವಿಲ್ಸನ್ ಸಾಲಿನ್ಸ್, ಹಿರಿಯ ದರ್ಜಿ ಪ್ರಭಾಕರ್ ಆಚಾರ್, ಕೃಷಿ-ಕಂಬಳ ಕ್ಷೇತ್ರದ ಸಾಧಕ ರಮೇಶ್ ಪೂಜಾರಿ, ಪ್ರಗತಿಪರ ಕೃಷಿಕ ಸತೀಶ್ ಶೆಟ್ಟಿ, ರಕ್ತದಾನಿ ಮತ್ತು ತುರ್ತು ರಕ್ತದ ವ್ಯವಸ್ಥಾಪಕ ದಿನೇಶ್ ಕಾಂಚನ್, ಉರಗ ಸಂಕುಲದ ಸಂರಕ್ಷಕ ವಿಜಯ್ ಪೂಜಾರಿ ಇವರಿಗೆ ವಿಶೇಷ ಅಭಿನಂದನೆಗಳು ಸಲ್ಲಿಸಲಾಗುತ್ತದೆ.

ಡಾಕ್ಟರೇಟ್ ಪದವೀಧರೆ ಡಾ. ಚೈತ್ರ ಭರತ್ ಶೆಟ್ಟಿ, ಸಹಾಯಕ ಪ್ರಾಸ್ಥಾಪಕ ಡಾ.ಗಜೇಂದ್ರ ಗುಳ್ಳಾಡಿ, ಮತ್ತೊಬ್ಬ ಸಹಾಯಕ ಪ್ರಾಧ್ಯಾಪಕ ಡಾ.ಶಮಂತ್ ಕುಮಾರ್ ಇವರಿಗೆ ಗೌರವ ಪುರಸ್ಕಾರ ಲಾರ್ಯಲ್ರಮ ನಡೆಯಲಿದೆ. ಬಳಿಕ ಸ್ಥಳೀಯ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರೋತ್ಸಾಹ ಧನ ವಿತರಣೆ ಮತ್ತು ಅಶಕ್ತರಿಗೆ ಆರ್ಥಿಕ ನೆರವು ನೀಡಲಾಗುತ್ತದೆ.

ಸಂಜೆ 6 ರಿಂದ ಸ್ಥಳೀಯ ಅಂಗನವಾಡಿ ಪುಟಾಣಿಗಳಿಂದ ನೃತ್ಯ ಸಿಂಚನ, ಬಳಿಕ ZEE ಕನ್ನಡ DKD ಖ್ಯಾತಿಯ ಹಾಗೂ ಹಲವಾರು ಟಿವಿ ರಿಯಾಲಿಟಿ ಶೋಗಳಲ್ಲಿ ಪಾಲ್ಗೊಂಡ ತಂಡ KOTA DANCE GREW ಇವರಿಂದ ಡಾನ್ಸ್ ಧಮಾಕ ಕಾರ್ಯಕ್ರಮ ನಡೆಯಲಿದೆ. ರಾತ್ರಿ ಶಿವದೂತ ಗುಳಿಗ ಖ್ಯಾತಿಯ ಕಲಾಸಂಗಮ ಕಲಾವಿದರಿಂದ ವಿಜಯ್‌ ಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶನದ ಐತಿಹಾಸಿಕ ನಾಟಕ ಕನ್ನಡದಲ್ಲಿ ಛತ್ರಪತಿ ಶಿವಾಜಿ ಪ್ರದರ್ಶನ ನಡೆಯುತ್ತದೆ ಎಂದು ಸಂಘಟಕರು ತಿಳಿಸಿದ್ದಾರೆ..


Aware others:

Leave a Reply

Your email address will not be published. Required fields are marked *

error: Content is protected !!