ಹಾರ್ಟ್ ಅಟ್ಯಾಕ್: ಹೃಷಿಕೇಶದಲ್ಲಿ ಬೈಂದೂರು ಮೂಲದ ಡಿ. ಎಫ್.ಒ ಸಾವು

ಕುಂದಾಪುರ: ಬೈಂದೂರು ಮೂಲದ ಐಎಫ್ ಎಸ್ ಅಧಿಕಾರಿಯೊಬ್ಬರು ಉತ್ತರ ಭಾರತಕ್ಕೆ ಕುಟುಂಬಸ್ಥರೊಂದಿಗೆ ಪ್ರವಾಸಕ್ಕೆ ತೆರಳಿದ್ದ ಸಂದರ್ಭ ಹೃಷಿಕೇಶದಲ್ಲಿ ಶನಿವಾರ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ್ದಾರೆ.
ಮೂಲತಃ ಬೈಂದೂರಿನವರಾಗಿರುವ,ಮಂಗಳೂರಿನ ಗೇರು ಅಭಿವೃದ್ಧಿ ನಿಗಮದಲ್ಲಿ ವಿಭಾಗೀಯ ನಿಯಂತ್ರಕ (ಡಿಸಿಎಫ್) ರಾಗಿ ಸೇವೆ ಸಲ್ಲಿಸುತ್ತಿರುವ ಐ ಎಫ್ ಎಸ್ ಅಧಿಕಾರಿ ಉದಯಕುಮಾರ್ ಜೋಗಿ (59) ಎಂಬವರೇ ಹೃಷಿಕೇಶದಲ್ಲಿ ಸಾವನ್ನಪ್ಪಿದವರು.
ಉದಯಕುಮಾರ್ ಜೋಗಿ ಅವರಿಗೆ ನಾಲ್ಕೈದು ತಿಂಗಳಲ್ಲಿ (ಇದೇ ವರ್ಷ) ನಿವೃತ್ತಿಯಾಗಲಿದ್ದು, ಈ ಹಿನ್ನೆಲೆಯಲ್ಲಿ ಇಎಲ್ ಪಡೆದು ರಜೆಯಲ್ಲಿ 10 ದಿನಗಳ ಹಿಂದೆ ಪತ್ನಿ ಹಾಗೂ ತಮ್ಮ ಸ್ನೇಹಿತರೊಂದಿಗೆ ಉತ್ತರ ಭಾರತಕ್ಕೆ ಪ್ರವಾಸಕ್ಕೆ ತೆರಳಿದ್ದರು. ಶನಿವಾರ ಅವರು ಹೃಷಿಕೇಶಕ್ಕೆ ಭೇಟಿ ನೀಡಿದ್ದರು.
ಈ ಸಂದರ್ಭದಲ್ಲಿ ಈ ಅವಘಢ ಸಂಭವಿಸಿದೆ. ಜೋಗಿ ಅವರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಇಬ್ಬರು ಪುತ್ರರು ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ. ಉದಯಕುಮಾರ್ ಜೋಗಿ ಅವರ ಮೃತದೇಹವನ್ನು (ಇಂದು) ಸೋಮವಾರ ಹುಟ್ಟೂರಿಗೆ ತರಲಾಗುವುದು ಎಂದು ತಿಳಿದುಬಂದಿದೆ.