BlogCrime newsEconomyGovernmentHighlightsLifestyleLocal newsOthersState newsTop StoriesTrending

ಪಡಿತರ ಅಕ್ಕಿ ಅಕ್ರಮ ಸಾಗಾಟ – ಪಿಕಪ್ ವಶಕ್ಕೆ

Aware others:

ಕುಂದಾಪುರ: ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಗಿಳಿಯಾರು ಎಂಬಲ್ಲಿ ಅಕ್ರಮವಾಗಿ ಪಿಕ್ ಅಪ್ ವಾಹನದಲ್ಲಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ಸಂದರ್ಭ ದಾಳಿ ನಡೆಸಿದ ಉಡುಪಿ ಜಿಲ್ಲಾ ಆಹಾರ ನಿರೀಕ್ಷಕ ಸುಧೀರ್  ಸಾಗಾಟಕ್ಕೆ ಬಳಸಿದ ವಾಹನ ಸಹಿತ ಅಕ್ಕಿ ವಶಪಡಿಸಿಕೊಂಡಿದ್ದು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಕೋಟ ಎಸೈ ರಾಘವೇಂದ್ರ ಜೊತೆಗೆ ದಾಳಿ ನಡೆಸಿದ ಆಹಾರ ನಿರೀಕ್ಷಕ ಸುಧೀರ್ ಅವರ ತಂಡ ಪರಿಶೀಲನೆ ನಡೆಸಿದಾಗ ಬೋಲೆರೋ ವಾಹನ ನಂಬ್ರ KA-20-C-6806 ನೇ ದರಲ್ಲಿ 42 ಪ್ಲಾಸ್ಟಿಕ್‌ ಚೀಲಗಳಲ್ಲಿ ಅಕ್ಕಿಯನ್ನು ಯಾವುದೇ ಪರವಾನಿಗೆ/ದಾಖಲಾತಿಗಳಿಲ್ಲದೇ ಅಕ್ರಮವಾಗಿ ತುಂಬಿಸಿ ಸಾಗಾಟ ಮಾಡಲಾಗುತ್ತಿದ್ದುದು ತಿಳಿದು ಬಂದಿದೆ. ಈ ಬಗ್ಗೆ ಚಾಲಕ ಎಂಬಾತನಲ್ಲಿ ವಿಚಾರಿಸಿದಾಗ ಸಾಲಿಗ್ರಾಮದ ಸುರೇಂದ್ರ ಎಂಬುವರ ಅಂಗಡಿಯಿಂದ ಸಾಗಿಸಲಾಗುತ್ತಿದೆ ಎಂದು ತಿಳಿಸಿದ್ದಾನೆ.. ಸ್ಥಳದಲ್ಲಿದ್ದ 42 ಚೀಲ ಅಕ್ಕಿ ಹಾಗೂ ಬೋಲೆರೋ KA-20-C-6806 ನೇ ವಾಹನ ಮತ್ತು ಚಾಲಕನನ್ನು ವಶಕ್ಕೆ ಪಡೆದುಕೊಂಡು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.


Aware others:

Leave a Reply

Your email address will not be published. Required fields are marked *

error: Content is protected !!