BlogEducationEntertainmentFashionGovernmentHighlightsHuman storiesLifestyleLocal newsNational NewsOthersState newsSuccess storiesTop StoriesTrendingWomen Care

ಹುತಾತ್ಮ ಯೋಧನಿಗೆ ದಿನನಿತ್ಯ ಸೆಲ್ಯೂಟ್ – ವೈರಲ್ ವಿಡಿಯೋದಲ್ಲಿರುವ ವಿದ್ಯಾರ್ಥಿನಿ ಯಾರು?

Aware others:

ವಿಶೇಷ ವರದಿ

ವಿಡಿಯೋ ವರದಿಗೆ ಇಲ್ಲಿ ಕ್ಲಿಕ್ಕಿಸಿ

ಕುಂದಾಪುರ: ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ನಾಲ್ಕು ಸೆಕೆಂಡುಗಳ ವಿಡಿಯೋ ಒಂದು ಲಕ್ಷಕ್ಕೂ ಮಿಕ್ಕಿ ವೀಕ್ಷಣೆಯನ್ನು ಪಡೆದು ವೈರಲ್ಲಾಗಿದೆ.   ಆದರೆ ನಿತ್ಯವೂ ಹುತಾತ್ಮ ಯೋಧ ಅನೂಪ್ ಪೂಜಾರಿಗೆ ಸೆಲ್ಯೂಟ್ ಹೊಡೆದು ಶಾಲೆಗೆ ಹೋಗುತ್ತಿರುವ ವಿದ್ಯಾರ್ಥಿನಿ ಯಾರು? ಇಲ್ಲಿದೆ ನೋಡಿ ಸ್ಟೋರಿ….

ಈಕೆಯ ಹೆಸರು ಲಹರಿ. ಕುಂದಾಪುರ ತಾಲೂಕಿನ ಸಿದ್ದಾಪುರದ ಸಮೀಪದ ಐರ್ಬೈಲ್ ಎಂಬಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ 5ನೇ ತರಗತಿ ವಿದ್ಯಾರ್ಥಿನಿ. ಶಾಲೆಯಿಂದ ಕೂಗುಗಳತೆಯ ದೂರದಲ್ಲಿ ಈಕೆಯ ಮನೆ ಇದೆ. ಲಹರಿ ತಂದೆ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಲೆ ಹುತಾತ್ಮರಾಗಿದ್ದಾರೆ. ತಾಯಿ ಉಷಾ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರತಿದಿನ ಸಮವಸ್ತ್ರ ಧರಿಸಿ ಮನೆಯಿಂದ ಶಾಲೆಗೆ ಹೋಗುವ ಲಹರಿಗೆ ಆಕೆಯ ಮಾವ ರಸ್ತೆ ದಾಟಿಸಿ ಬಿಡುತ್ತಾರೆ. 

ಶಾಲೆಗೆ ಹೋಗುವ ಮಾರ್ಗದಲ್ಲಿ ಹುತಾತ್ಮ ಯೋಧ ಅನೂಪ್ ಪೂಜಾರಿಯ ಭಾವಚಿತ್ರವಿರುವ “ಐರ್ಬೈಲ್ ಗೆಳೆಯರ ಬಳಗ” ಎಂಬ ಹೆಸರಿನ ಫ್ಲೆಕ್ಸ್ ಬೋರ್ಡ್ ಹಾಕಲಾಗಿದೆ. ಲಹರಿ ಪ್ರತಿದಿನ ಹುತಾತ್ಮ ಯೋಧನಿಗೆ ಗೌರವ ಸೂಚಿಸಿಯೇ ಶಾಲೆಗೆ ಹೋಗುತ್ತಾಳೆ. ಹಗಲಿರುಳು ನಮ್ಮ ದೇಶದ ಗಡಿಯನ್ನು ಕಾಯುತ್ತಾ ನಮಗೆ ನೆಮ್ಮದಿಯ ಬದುಕು ಕಟ್ಟಿಕೊಟ್ಟಿರುವ ಯೋಧರಿಗೆ ನಾವು ಮೊದಲು ಗೌರವ ಸಲ್ಲಿಸಬೇಕು ಎನ್ನುತ್ತಾಳೆ ಲಹರಿ. 

ಗಡಿ ಕಾಯುವುದು, ಕಾನೂನು ಪಾಲಿಸುವುದು ಇವೆಲ್ಲವೂ ದೇಶಭಕ್ತಿಯ ಪ್ರತೀಕ. ಅವಳ ತಂದೆಯೂ ಬದುಕಿದ್ದಾಗ ಇದನ್ನು ಅವಳಿಗೆ ಹೇಳಿ ಕೊಟ್ಟಿದ್ದಾರೆ. ಮಗಳ ದೇಶಭಕ್ತಿ ನಮಗೆ ಖುಷಿ ಕೊಟ್ಟಿದೆ ಎನ್ನುತ್ತಾರೆ ಆಕೆಯ ತಾಯಿ ಉಷಾ.

ಲಹರಿ ವಿಡಿಯೋ ವರಲ್ಲಾಗುತ್ತಿದ್ದಂತೆಯೇ ಅತೀ ಹೆಚ್ಚು ಖುಷಿ ಪಟ್ಟವರು ಐರ್ಬೈಲ್ ಕಿರಿಯ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯ ಬಾಬು ಕುಲಾಲ್ ಅವರು. ಗ್ರಾಮೀಣ ಭಾಗದ ಶಾಲೆಯೊಂದು ರಾಷ್ಟ್ರ ಭಕ್ತಿಯ ಮೂಲಕ ಪ್ರಸಿದ್ಧಿ ಪಡೆಯಲು ವಿದ್ಯಾರ್ಥಿನಿ ಲಹರಿ ಕಾರಣವಾಗಿದ್ದಾಳೆ ಎನ್ನುತ್ತಾರೆ ಬಾಬು ಕುಲಾಲ್.

ಒಟ್ಟಾರೆಯಾಗಿ ದೇಶ ಭಕ್ತಿ, ರಾಷ್ಟ್ರ ಶಕ್ತಿ ಎನ್ನುವುದನ್ನು ಗ್ರಾಮೀಣ ಭಾಗದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯೊಬ್ಬಳು  ತೋರಿಸಿಕೊಡುವ ಮೂಲಕ ದೇಶಕ್ಕೆ ಮಾದರಿಯಾಗಿದ್ದಾಳೆ.


Aware others:

Leave a Reply

Your email address will not be published. Required fields are marked *

error: Content is protected !!