ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ಸೇವಾ ಆಧಾರಿತ ಜೀವನವನ್ನು ಕಲಿಸುತ್ತದೆ – ಪಿ.ಜಿ.ಆರ್. ಸಿಂಧ್ಯಾ
ಕುಂದಾಪುರ: ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ಸೇವಾ ಆಧಾರಿತ ಜೀವನವನ್ನು ಕಲಿಸುತ್ತದೆ. ಸಮಗ್ರ ಸಮಾಜವನ್ನು ನಿರ್ಮಿಸಲು ಸ್ಕೌಟ್ಸ್ ಮತ್ತು ಗೈಡ್ಸ್ ಬಹಳ ಅವಶ್ಯಕವಾಗಿದೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಮುಖ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ ಹೇಳಿದರು.

ಅವರು ಕುಂದಾಪುರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿರುವ ಒಕ್ ವುಡ್ ಇಂಡಿಯನ್ ಸ್ಕೂಲ್ನಲ್ಲಿ ನಡೆದ ಸ್ಕೌಟ್ ಮತ್ತು ಗೈಡ್ಸ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಭೂಮಿಯ ಮೇಲಿನ ಎಲ್ಲ ಜೀವಿಗಳ ಬಗ್ಗೆ ಪ್ರೀತಿ ಮತ್ತು ಸಹಾನುಭೂತಿ ತೋರಿಸಬೇಕು. ಇಂತಹ ಚಳುವಳಿಗಳು ಸೇವೆಯನ್ನು ಹಾಗೂ ಶಿಸ್ತನ್ನು ಹೇಳಿಕೊಡುತ್ತವೆ. ಯುವ ಸಮಾಜ ಸೃಷ್ಟಿಗೆ ನಮ್ಮ ಜವಾಬ್ದಾರಿಗಳನ್ನು ಅರಿತುಕೊಂಡು ಮುಂದೆ ಸಾಗಬೇಕು ಎಂದರು. ಈ ಸಂದರ್ಭ ಶಾಲೆಯ ಮುಖ್ಯಸ್ಥರಾದ ನೀತಾ ಶೆಟ್ಟಿ, ಅಭಿನಂದನ್ ಶೆಟ್ಟಿ, ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.
