ಬೈಂದೂರು: ಬ್ಲಾಕ್ ಯುವ ಕಾಂಗ್ರೆಸ್‌ನ ಅಧ್ಯಕ್ಷರಾಗಿ ಭರತ್ ದೇವಾಡಿಗ ಆಯ್ಕೆ
ಕುಂದಾಪುರ: ಬೈಂದೂರು ಬ್ಲಾಕ್ ಯುವ ಕಾಂಗ್ರೆಸ್‌ನ ನೂತನ ಅಧ್ಯಕ್ಷರ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಭರತ್ ದೇವಾಡಿಗ ಬಿಜೂರು ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಕಾಂಗ್ರೆಸ್ ಪಕ್ಷದ ವಿವಿಧ ಪದಾಧಿಕಾರಿಗಳ ಹುದ್ದೆಗೆ ಇತ್ತೀಚೆಗೆ ಆನ್ ಲೈನ್ ಮತದಾನ ನಡೆದಿತ್ತು. ಈ ಚುನಾವಣೆಯಲ್ಲಿ ಬೈಂದೂರು ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಭರತ್ ದೇವಾಡಿಗ ಹಾಗೂ ಅವರು ಸ್ಪರ್ಧಿಸಿದ್ದರು. ಅತೀ ಹೆಚ್ಚು ಮತ ಪಡೆದ ಭರತ್ ದೇವಾಡಿಗ ಚುನಾವಣೆಯಲ್ಲಿ ಆಯ್ಕೆಯಾಗುವ ಮೂಲಕ ಬೈಂದೂರು ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.
ಜೆಸಿಐ ಉಪ್ಪುಂದ ಇದರ ಅಧ್ಯಕ್ಷರೂ ಆಗಿರುವ ಭರತ್ ದೇವಾಡಿಗ, ಖಂಬದ ಕೋಣೆ ರೈತರ ಸೇವಾ ಸಹಕಾರಿ ಸಂಘದಲ್ಲಿ ಎರಡನೇ ಬಾರಿಗೆ ನಿರ್ದೆಶಕರಾಗಿ ಆಯ್ಕೆಯಾಗಿದ್ದಾರೆ.