ಗೂಡ್ಸ್ ವಾಹನ ಸ್ಕೂಟರ್ ಡಿಕ್ಕಿ – ಸವಾರಗೆ ಗಾಯ
ಕುಂದಾಪುರ: ಸ್ಕೂಟರ್ ಗೆ ಗೂಡ್ಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಕುಂದಾಪುರ ಸಮಚಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಕೋಟೇಶ್ವರ ಸಮೀಪ ನಡೆದಿದೆ.
ಕುಂದಾಫುರದ ಕೋಡಿ ನಿವಾಸಿ ಗಣೇಶ್ ಎಂಬುವರೇ ಗಾಯಗೊಂಡ ಸ್ಕೂಟರ್ ಸವಾರ. ಗಣೇಶ್ ಅವರು ಸ್ಕೂಟರ್ನಲ್ಲಿ ಬೀಜಾಡಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕುಂಬಾಶಿ ಕಡೆಯಿಂದ ಕೋಟೆಶ್ವರ ಕಡೆಗೆ ಬರುತ್ತಿದ್ದರು. ಇದೇ ಸಂದರ್ಭ ಬೀಜಾಡಿ ಕ್ರಾಸ್ ತಲುಪುತಿದ್ದಂತೆ ಅದೆ ದಿಕ್ಕಿನಿಂದ ಕೋಟೆಶ್ವರ ಕಡೆಗೆ ಬರುತ್ತಿದ್ದ ಗೂಡ್ಸ್ ವಾಹನ ಡಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡ ಸ್ಕೂಟರ್ ಸವಾರ ಗಣೇಶ್ ಅವರನ್ನು ಸ್ಥಳೀಯರು ಸಮೀಪದ ಖಾಸಗೀ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕುಂದಾಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.