ಬೈಕ್ ಡಿಕ್ಕಿ – ಪಾದಾಚಾರಿ ಹಾಗೂ ಬೈಕ್ ಸವಾರಗೆ ಗಾಯ
ಕುಂದಾಪುರ: ರಸ್ತೆ ದಾಟುತ್ತಿದ್ದ ವೇಳೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಪಾದಾಚಾರಿ ಗಾಯಗೊಂಡ ಘಟನೆ ಕುಂದಾಪುರದ ಸಮೀಪದ ತಲ್ಲೂರು ಗ್ರಾಮದ ಗುಳ್ವಾಡಿ ವೇ ಬ್ರೀಡ್ಜ್ ಹತ್ತಿರ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ. ಹೇರಿಕುದ್ರು ಗ್ರಾಮದ ರಘುರಾಮ(65) ಗಾಯಗೊಂಡು ಆಸ್ಪತ್ರೆ ಸೇರಿದವರು. ರಘುರಾಮ್ ತಲ್ಲೂರು ಗ್ರಾಮದ ಗುಳ್ವಾಡಿ ವೇ ಬ್ರೀಡ್ಜ್ ಹತ್ತಿರ ರಾಷ್ಟ್ರೀಯ ಹೆದ್ದಾರಿ 66ರ ನ್ನು ಪಶ್ಚಿಮ ಬದಿಯಿಂದ ದಾಟಿ ಪೂರ್ವ ಬದಿಗೆ ಹೋಗಲು ಕುಂದಾಪುರ-ಬೈಂದೂರು ಏಕಮುಖ ರಸ್ತೆ ದಾಟಿ ರಸ್ತೆ ವಿಭಾಜಕದ ಹತ್ತಿರ ತಲುಪುಷ್ಟರಲ್ಲಿ ಸಂಗಮ್ ಕಡೆಯಿಂದ ತಲ್ಲೂರು ಕಡೆಗೆ ಬರುತ್ತಿದ್ದ ಬೈಕ್ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದು ಅವರ ಹಣೆಗೆ, ಮೂಗಿಗೆ, ಎರಡು ಕೈಗಳಿಗೆ ಹಾಗೂ ಬಲಕಾಲಿಗೆ ತರಚಿದ ರಕ್ತಗಾಯ ಮತ್ತು ಒಳನೋವು ಆಗಿದ್ದು, ಮೋಟಾರ್ ಸೈಕಲ್ ಸವಾರ ಜಾನಿ ರವರಿಗೆ ಎರಡು ಕೈಗಳಿಗೆ ಹಾಗೂ ಎರಡು ಕಾಲಿಗೆ ರಕ್ತಗಾಯ ಮತ್ತು ಒಳ ನೋವು ಆಗಿದ್ದು ಚಿಕಿತ್ಸೆಗೆ ಕುಂದಾಪುರ ಚಿನ್ಮಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
