ಕುಂದಾಪುರ: ಮೌಲ್ಯಾಧಾರಿತ ಅಧ್ಯಯನದಿಂದ ಉತ್ತಮ ಭವಿಷ್ಯ ಸಾಧ್ಯ – ಮೊಹಮ್ಮದ್ ಸಲೀಮ್ ಮೂಡಬಿದ್ರೆ
ಎನ್.ಎನ್.ಒ. ವತಿಯಿಂದ ವಿದ್ಯಾರ್ಥಿವೇತನ ವಿತರಣೆ









ಕುಂದಾಪುರ: ವಿದ್ಯಾರ್ಥಿ ಗಳು ತನ್ನ ವಿದ್ಯಾಭ್ಯಾಸ ದ ಜೊತೆಗೆ ಕ್ರೀಡೆ, ಧಾರ್ಮಿಕ, ಕಾರ್ಯ ಗಳಲ್ಲಿ ತೊಡಗಿಸಿಕೊಂಡರೆ ದುಶ್ಚಟಗಳಿಂದ ದೂರ ಉಳಿಯಲು ಸಾಧ್ಯ. ಪ್ರತಿಯೊಬ್ಬರು ಪರಸ್ಪರ ಅರಿತು ನಡೆದರೆ ಸಮಾಜದಲ್ಲಿ ಶಾಂತಿ ನೆಲೆಯಾಗುತ್ತದೆ ಎಂದು ಎನ್ ಎನ್ ಒ ಇದರ ಸ್ಥಾಪಕ ಅಧ್ಯಕ್ಷ ಮೊಹಮ್ಮದ್ ಸಲೀಮ್ ಮೂಡಬಿದ್ರೆ ಹೇಳಿದರು. ಅವರು ಕುಂದಾಪುರದ ಎನ್ ಎನ್ ಒ ಕಮ್ಯುನಿಟಿ ಸೆಂಟರ್ ಇವರ ಆಶ್ರಯದಲ್ಲಿ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ, ಕಾಲೇಜು ಹಾಗು ಉನ್ನತ ವ್ಯಾಸಂಗ ಮಾಡುತ್ತಿರುವ 10 ವಿದ್ಯಾರ್ಥಿಗಳಿಗೆ ಬೈತುಲ್ ಮಾಲ್ ಹಂಗಾರಕಟ್ಟೆ ಇವರ ಸಹಕಾರ ದೊಂದಿಗೆ ಸ್ಕೋಲರ್ಷಿಪ್ ನ್ನು ವಿತರಿಸಿ ಮಾತನಾಡಿದರು.




ಎನ್ ಎನ್ ಒ ಕಮ್ಯೂನಿಟಿ ಸೆಂಟರ್ ಕುಂದಾಪುರ ದ ಅಧ್ಯಕ್ಷ ಅಬ್ದುಲ್ ಮುನಾಫ್ ಹಂಗಾರಕಟ್ಟೆ ಅಧ್ಯಕ್ಷ ತೆ ವಹಿಸಿ ಮಾತನಾಡಿ, ಬಡ ವಿದ್ಯಾರ್ಥಿಗಳು, ಉನ್ನತ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು, ವೈದ್ಯಕೀಯ, ಕಾನೂನು ವಿದ್ಯಾರ್ಥಿಗಳು,, ಐ ಏ ಎಸ್, ಐ ಪಿ ಎಸ್ ಹಾಗು ಸರ್ಕಾರಿ ಉದ್ಯೋಗಗಳ ಪ್ರವೇಶ ಪರೀಕ್ಷೆಗಳಿಗೆ ಉಚಿತ ಕೋಚಿಂಗ್ ಹಾಗೂ ಇನ್ನಿತರ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ನಮ್ಮ ನಾಡ ಒಕ್ಕೂಟ ಕಮ್ಯೂನಿಟಿ ಸೆಂಟರ್ ಕುಂದಾಪುರ ಆಸರೆಯಾಗಿ ನಿಂತಿದೆ. ಹಲವಾರು ಶಿಕ್ಷಣದಿಂದ ವಂಚಿತರಾದ ವಿದ್ಯಾರ್ಥಿಗಳಿಗೆ ಮರಳಿ ಶಿಕ್ಷಣ ಕೊಡಿಸುವ ಕೆಲಸಗಳನ್ನು ಸಂಸ್ಥೆ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಬಡ್ಡಿ ರಹಿತ ಶಿಕ್ಷಣ ಸಾಲ, ವೃದ್ಧಾಶ್ರಮದ ಯೋಜನೆ ನಡೆಸಲಾಗುತ್ತಿದೆ. ಇದಕ್ಕಾಗಿ ಸಮಾಜದ ಸಹಕಾರ ನಿರಂತರವಾಗಿ ಬೇಕಿದೆ ಎಂದರು.







ಪ್ರದಾನ ಕಾರ್ಯದರ್ಶಿ ಹುಸೇನ್ ಹೈಕಾಡಿ ಪ್ರಾಸ್ತಾವಿಕ ಮಾತನಾಡಿ ಸಂಸ್ಥೆ ಬೆಳೆದು ಬಂದ ರೀತಿಯನ್ನು ವಿವರಿಸಿದರು. ಶಿಕ್ಷಣಕ್ಕಾಗಿ ಸಂಸ್ಥೆ ನೀಡುತ್ತಿರುವ ಆರ್ಥಿಕ ಸಹಾಯಧನದ ಕುರಿತು ಮಾಹಿತಿ ನೀಡಿದರು. ಎನ್ ಎನ್ ಒ ಉಡುಪಿ ಜಿಲ್ಲಾ ಅಧ್ಯಕ್ಷ ಮುಸ್ತಾಕ್ ಅಹ್ಮದ್ ಬೆಳ್ವೆ, ಉದ್ಯಮಿಗಳಾದ ಆದಿಲ್ ಸಾಲಿಗ್ರಾಮ, ಫೈರೋಜ್ ಖಾನ್ ಮೈಸೂರ್, ಉಡುಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಫಾಝಿಲ್ ಅದಿ ಉಡುಪಿ, ದಾರುಲ್ ಹುದಾ ಚಾರಿಟೇಬಲ್ ಟ್ರಸ್ಟ್ ಇದರ ಪ್ರದಾನ ಕಾರ್ಯದರ್ಶಿ ಡಾ ನಕ್ವಾ ಪರ್ವೇಜ್ ಅಹ್ಮದ್ ಉಮ್ರಿ ಮದನಿ, ಎನ್ ಎನ್ ಒ ಉಡುಪಿ ಘಟಕದ ಜಿಲ್ಲಾ ಖಜಾಂಚಿ ನಕ್ವಾ ಯಾಯ್ಯ, ಬೈತುಲ್ ಮಾಲ್ ಹಂಗಾರಕಟ್ಟೆ ಇದರ ಖಜಾಂಚಿ ಜವಾದ್ ಅಕ್ಬರ್ , ಜೆಸಿಐ ಕುಂದಾಪುರ ಸಿಟಿ ಯಾ ಅಧ್ಯಕ್ಷ ಯೂಸುಫ್ ಸಲೀಮ್ , ಉಡುಪಿ ಘಟಕದ ಉಪಾಧ್ಯಕ್ಷ ರಿಯಾಜ್ ಅಹ್ಮದ್ ಉಡುಪಿ, ಎನ್ ಎನ್ ಒ ಉಡುಪಿ ಜಿಲ್ಲಾ ಪ್ರದಾನ ಕಾರ್ಯದರ್ಶಿ ಝಹಿರ್ ಅಹ್ಮದ್ ಗಂಗೊಳ್ಳಿ, ಕುಂದಾಪುರ ಎನ್ ಎನ್ ಒ ಘಟಕದ ಅಧ್ಯಕ್ಷ ಎಸ್ ದಸ್ತಗೀರ್, ಉಡುಪಿ ಘಟಕದ ಅಧ್ಯಕ್ಷ ನಝಿರ್ ನೆಜಾರ್, ಕುಂದಾಪುರ ಎನ್ ಎನ್ ಒ ಕಮ್ಯುನಿಟಿ ಸೆಂಟರ್ ಉಪಾಧ್ಯಕ್ಷ ಮೊಹಮ್ಮದ್ ಗುಲ್ವಾಡಿ, ಮನ್ಸೂರ್ ಇಬ್ರಾಹಿಂ, ಅಬ್ದುಲ್ ಖಾದರ್ ಮೂಡುಗೋಪಾಡಿ, ಸದ್ಯಸ್ಯರಾದ ಅಲ್ತಾಫ್ ಮೂಡ್ ಗೋಪಾಡಿ, ನಾಸಿರ್ ಮೂಡುಗೋಪಾಡಿ, ಖಜಾಂಚಿ ಅನ್ವರ್ ಕಂಡ್ಲೂರ್ ಉಪಾಧ್ಯಕ್ಷ ನಿಹಾರ್ ಅಹ್ಮದ್ ಕುಂದಾಪುರ ಇನ್ನಿತರರು ಉಪಸ್ಥಿತರಿದ್ದರು. ಉಡುಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಅಬು ಮೊಹಮ್ಮದ್ ಸ್ವಾಗತಿಸಿ ನಾಸಿರ್ ಮೂಡ್ ಗೋಪಾಡಿ ವಂದಿಸಿದರು.
