ಕುಂದಾಪುರ: ನವೆಂಬರ್ 21 ರಂದು ನಡೆಯಬೇಕಿದ್ದ ಲೋಕಾಯುಕ್ತ ಜನಸಂಪರ್ಕ ಸಭೆ ಮುಂದೂಡಿಕೆ

ಕುಂದಾಪುರ: ನಾಳೆ ನವೆಂಬರ್ 21ರಂದು ಬೆಳ್ಳಿಗ್ಗೆ 11-00 ಗಂಟೆಯಿಂದ 1.30 ಗಂಟೆಗೆ ಕುಂದಾಪುರ ತಾಲೂಕು ಕಛೇರಿಯಲ್ಲಿ ನಡೆಯಬೇಕಿದ್ದ ಲೋಕಾಯುಕ್ತ ಜನಸಂಪರ್ಕ ಸಭೆ ಹಾಗೂ ಸಾರ್ವಜನಿಕ ಅಹವಾಲು ಕಾರ್ಯಕ್ರಮ ಅನಿರ್ದಿಷ್ಟ ದಿನದ ವರೆಗೆ ಮುಂದೂಡಲ್ಪಟ್ಟಿದೆ ಎಂದು ಕರ್ನಾಟಕ ಲೋಕಾಯುಕ್ತ ವಿಭಾಗದ ಉಡುಪಿ ಪೊಲೀಸ್ ಉಪಾಧೀಕ್ಷಕರ ಕಛೇರಿಯ ಪ್ರಕಟಣೆ ತಿಳಿಸಿದೆ.
ಈ ಬಗ್ಗೆ ಕುಂದಾಪುರ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಹಾಜರಿರುವಂತೆ ಸೂಚಿಸಲಾಗಿದ್ದು, ಅಹವಾಲು ನೀಡುವವರು ಹಾಗೂ ಸಾರ್ವಜನಿಕರು ಭಾಗವಹಿಸುವಂತೆ ಉಡುಪಿ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕರು ತಿಳಿಸಿದ್ದರು. ಆದರೆ ಇದೀಗ ಸಭೆ ಮುಂದೂಡಲ್ಪಟ್ಟಿದೆ. ಸಭೆಯ ಮುಂದಿನ ದಿನಾಂಕ ತಿಳಿದು ಬಂದಿಲ್ಲ
