ಕುಂದಾಪುರ: ಹೈಕಾಡಿ ವಿದ್ಯಾರ್ಥಿನಿ ಹರ್ಡಲ್ಸ್ ನಲ್ಲಿ ರಾಜ್ಯಕ್ಕೆ ಆಯ್ಕೆ

ಕುಂದಾಪುರ: ಸರ್ಕಾರಿ ಪ್ರೌಢಶಾಲೆ ಹೈಕಾಡಿ ಇಲ್ಲಿನ ವಿದ್ಯಾರ್ಥಿನಿ ಕುಮಾರಿ ಇಂಚರ 100 ಮೀಟರ್ ಹರ್ಡಲ್ಸಿನಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಉಡುಪಿ ಜಿಲ್ಲಾ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟದಲ್ಲಿ 100 ಮೀಟರ್ ಹರ್ಡಲ್ಸಿನಲ್ಲಿ ಪ್ರಶಸ್ತಿ ಪಡೆದ ಅವರು, ಕೋಲಾರದಲ್ಲಿ ನಡೆಯುವ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಪ್ರೌಢ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಪ್ರವೀಣ್ ಕುಮಾರ್ ಶೆಟ್ಟಿ ತರಬೇತಿ ನೀಡಿದ್ದಾರೆ. ಮುಖ್ಯ ಶಿಕ್ಷಕ ಗಣೇಶ್ ಕಿಣಿ ಮತ್ತು ಶಿಕ್ಷಕರು ಸಹಕರಿಸಿದ್ದಾರೆ.