ರಾಮ ದೇವಾಡಿಗರಿಗೆ ರಾಜ್ಯಮಟ್ಟದ ” ಅಪರ್ಣಾ ನಿರೂಪಣಾ ರತ್ನ” ಪ್ರಶಸ್ತಿ
ಕುಂದಾಪುರ: ಸೂರ್ಯ ಫೌಂಡೇಶನ್, ಬೆಂಗಳೂರು, ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ (ರಿ.) ಮೈಸೂರು ಮತ್ತು ಸ್ಪಾರ್ಕ್ ಅಕಾಡೆಮಿ ಬೆಂಗಳೂರು ವತಿಯಿಂದ ಕಾರ್ಯಕ್ರಮ ನಿರೂಪಕರಿಗೆ ನೀಡಲಾಗುವ ರಾಜ್ಯ ಮಟ್ಟದ “ಅಪರ್ಣಾ ನಿರೂಪಣಾ ರತ್ನ” ಪ್ರಶಸ್ತಿಗೆ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ ಉಪ ಪ್ರಾಂಶುಪಾಲ ರಾಮ ದೇವಾಡಿಗ ಆಯ್ಕೆಯಾಗಿದ್ದಾರೆ.

ಬೆಂಗಳೂರಿನ ಇಂಡೋ ಗ್ಲೋಬೋ ಕಾಲೇಜ್, ಹೆಸರಘಟ್ಟದಲ್ಲಿ ಕ್ಟೋಬರ್ 15ರಂದು ನಡೆಯುವ ರಾಜ್ಯ ಮಟ್ಟದ ಶೈಕ್ಷಣಿಕ ಸಮ್ಮೇಳನ -2024 ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
