ಸಿಂಗಾಪುರ: ಮಿಮಿಕ್ರಿ ಕಲಾವಿದ “ಸಿಂಗಾಪುರ ಶಿವಾಜಿ” ಯಾನೇ ಅಶೋಕನ್ ಕುಸಿದು ಬಿದ್ದು ಸಾವು

ಸಿಂಗಾಪುರ: ಇಲ್ಲಿನ ಪ್ರಸಿದ್ಧ ಮಿಮಿಕ್ರಿ ಕಲಾವಿದ “ಸಿಂಗಾಪುರ ಶಿವಾಜಿ” ಎಂದೇ ಖ್ಯಾತಿ ಹೊಂದಿದ್ದ ಅಶೋಕನ್ ಮುನಿಯಾಂಡಿ (60) ಶನಿವಾರ ಸಂಜೆ ಸಮಾರಂಭವೊಂದರಲ್ಲಿ ಕಾರ್ಯಕ್ರಮ ನೀಡುತ್ತಿದ್ದಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಶನಿವಾರ ಸಿಂಗಾಪುರದಲ್ಲಿ ನಡೆಯುತ್ತಿದ್ದ ಹುಟ್ಟುಹಬ್ಬದ ಸಂತೋಷ ಕೂಟವೊಂದರಲ್ಲಿ ಅಶೋಕನ್ ಮುನಿಯಾಂಡಿ ಯಾನೇ ಸಿಂಗಾಪುರ ಶಿವಾಜಿ ಸಹ ಕಲಾವಿದೆಯೊಂದಿಗೆ ಪ್ರದರ್ಶನ ನೀಡುತ್ತಿದ್ದರು. ಈ ಸಂದರ್ಭ ಒಂದು ಹಾಡು ಹಾಡಿ ಚಪ್ಪಾಳೆ ತಟ್ಟುತ್ತಾ ಮೆಲ್ಲಗೆ ಹೆಜ್ಜೆ ಹಾಕುತ್ತಿದ್ದಾಗ ಒಮ್ಮಿಂದೊಮ್ಮೆಲೆ ಹಠಾತ್ ಕುಸಿದು ಬಿದ್ದು ತೀರಿಕೊಂಡಿದ್ದಾರೆ.

ಅಶೋಕ್ ಯಾನೇ ಸಿಂಗಾಪುರ ಶಿವಾಜಿ ಎಂ.ಜಿ.ಆರ್ ನಟನೆಯನ್ನು ನಕಲಿಸಿ ನಟಿಸುವುದರಲ್ಲಿ ಪ್ರಖ್ಯಾತಿ ಹೊಂದಿದ್ದರು. ಅವರ ಆಕಸ್ಮಿಕ ನಿಧನಕ್ಕೆ ಜಗತ್ತಿ ಕಲಾವಿದರು ಆಘಾತಗೊಂಡಿದ್ದಾರೆ.
