*ಕುಂದಾಪುರ: ಯುವ ಬಂಟರ ಸಂಘದಿಂದ ಯುವ ಸಾಧಕ ಮುಗ್ಧ ಶೆಟ್ಟಿಗೆ ಸನ್ಮಾನ*

ಕುಂದಾಪುರ: 2024ನೇ ಸಾಲಿನ ತೆಲಂಗಾಣ ರಾಜ್ಯ ಪ್ರೌಢ ಶಿಕ್ಷಣ ಮಂಡಳಿ ನಡೆಸಿದ 10 ನೇ ತರಗತಿ ವಾರ್ಷಿಕ ಪರೀಕ್ಷೆಯಲ್ಲಿ 10 ಕ್ಕೆ 10 ಸಿಜಿಪಿಎ ಗಳಿಸುವ ಮೂಲಕ ತೆಲಂಗಾಣ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಕುಂದಾಪುರ ತಾಲೂಕಿನ ತೆಕ್ಕೆಟ್ಟೆಯ ಮಲ್ಯಾಡಿ ಗ್ರಾಮದ ಯುವ ಸಾಧಕ ಮುಗ್ಧ ಶೆಟ್ಟಿಯವರನ್ನು ಕುಂದಾಪುರ ತಾಲೂಕು ಯುವ ಬಂಟರ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಕುಂದಾಪುರ ತಾಲೂಕು ಯುವ ಬಂಟರ ಸಂಘದ ಸ್ಥಾಪಕಾಧ್ಯಕ್ಷ, ದಶಮ ಸಂಭ್ರಮದ ಅಧ್ಯಕ್ಷ ಡಾ.ಅಂಪಾರು ನಿತ್ಯಾನಂದ ಶೆಟ್ಟಿ ಮುಗ್ಧ ಶೆಟ್ಟಿಯವರನ್ನು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭ ಮುಗ್ಧ ಶೆಟ್ಟಿ ಪೋಷಕರಾದ ಹೈದ್ರಾಬಾದ್ ನ ಹೋಟೆಲ್ ಉದ್ಯಮಿ, ಸಂಘದ ಪೋಷಕರಾದ ಅಣ್ಣಪ್ಪ ಶೆಟ್ಟಿ , ಧರ್ಮಪತ್ನಿ ಹೇಮಾ ಶೆಟ್ಟಿ , ಹೈದರಾಬಾದ್ ನ ಯುವ ಹೋಟೆಲ್ ಉದ್ಯಮಿ, ಸಂಘದ ಪೋಷಕ ಶ್ರೀಕಾಂತ ಶೆಟ್ಟಿ ಉಳ್ತೂರು, ಸಂಘದ ಮಾಜಿ ಅಧ್ಯಕ್ಷ ಸುನಿಲ್ ಕುಮಾರ್ ಶೆಟ್ಟಿ ಹೇರಿಕುದ್ರು, ಉಪಾಧ್ಯಕ್ಷ ಉದಯ್ ಕುಮಾರ್ ಶೆಟ್ಟಿ ಮಚ್ಚಟ್ಟು,ಅರುಣ್ ಕುಮಾರ್ ಶೆಟ್ಟಿ ಕುಂದಾಪುರ, ಸತೀಶ್ ಶೆಟ್ಟಿ ಹೆಸ್ಕತ್ತೂರು, ಸುಕುಮಾರ್ ಶೆಟ್ಟಿ ಕಮಲಶಿಲೆ ಉಪಸ್ಥಿತರಿದ್ದರು. ಡಾ.ಚೇತನ ಕುಮಾರ್ ಶೆಟ್ಟಿ ಕೊವಾಡಿ ಪ್ರಾಸ್ತಾವಿಸಿದರು. ದಶಮ ಸಂಭ್ರಮದ ಕೋಶಾಧಿಕಾರಿ ಅಕ್ಷಯ ಹೆಗ್ಡೆ ಮೊಳಹಳ್ಳಿ ನಿರೂಪಿಸಿ, ವಂದಿಸಿದರು.
