ಕುಂದಾಪುರ: ತುಳುನಾಡ ರಕ್ಷಣಾ ವೇದಿಕೆ ಅಧ್ಯಕ್ಷರಾಗಿ ಪವರ್ ಲಿಪ್ಟರ್ ಸತೀಶ್ ಖಾರ್ವಿ ಆಯ್ಕೆ
ಕುಂದಾಪುರ: ಅಂತರಾಷ್ಟ್ರೀಯ ಲಿಫ್ಟಿಂಗ್ ಕ್ರೀಡಾಪಟು, ಕಾಮನ್ವೆಲ್ತ್ ಚಿನ್ನದ ಪದಕ ವಿಜೇತ ಸತೀಶ್ ಖಾರ್ವಿ ಕುಂದಾಪುರ ಇವರು ತುಳುನಾಡ ರಕ್ಷಣಾ ವೇದಿಕೆ (ರಿ) ಇದರ ಕುಂದಾಪುರ ತಾಲೂಕು ಘಟಕದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಸೆಪ್ಟಂಬರ್ 23ರಂದು ಕೇಂದ್ರೀಯ ಮಂಡಳಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸತೀಶ್ ಖಾರ್ವಿ ಯವರನ್ನು ತುಳುನಾಡ ರಕ್ಷಣಾ ವೇದಿಕೆ (ರಿ) ಕುಂದಾಪುರ ತಾಲೂಕು ಘಟಕದ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ಈ ಸಂದರ್ಭ ಆಯ್ಕೆಯಾದ ಸತೀಶ್ ಖಾರ್ವಿ ರವರನ್ನು ತುಳುನಾಡ ವೇದಿಕೆ ಕೇಂದ್ರ ಮಂಡಳಿ ಅಧ್ಯಕ್ಷ ಯೋಗೇಶ್ ಶೆಟ್ಟಿ ಜಪ್ಪುರವರು ಸಂಘಟನೆಯ ಶಾಲು ಹೊದಿಸಿ ಹೂ ಗುಚ್ಛ ನೀಡಿ ಅಭಿನಂದಿಸಿದರು. ಕೇಂದ್ರೀಯ ಮಂಡಳಿ ಕಚೇರಿ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬ, ಉಡುಪಿ ಜಿಲ್ಲಾ ವೀಕ್ಷಕ ಫ್ರಾಂಕಿ ಡಿಸೋಜ ಕೊಳಲಗಿರಿ ಉಪಸ್ಥಿತರಿದ್ದರು
