ಗಂಗೊಳ್ಳಿ : ಏಕಾಹ ಭಜನೆಗೆ ಚಾಲನೆ
ಕುಂದಾಫುರ: ಗಂಗೊಳ್ಳಿಯ ಕಲೈಕಾರ್ ಮಠ ಶ್ರೀ ನಗರ ಮಹಾಕಾಳಿ ಅಮ್ಮನವರ ಮತ್ತು ಶ್ರೀ ಕಲ್ಲುಕುಟ್ಟಿಗ ದೇವಸ್ಥಾನದಲ್ಲಿ ವರ್ಷಂಪ್ರತಿ ಶ್ರಾವಣ ಮಾಸದಲ್ಲಿ ಜರಗುವ ಏಕಾಹ ಭಜನೆ ಕಾರ್ಯಕ್ರಮ ಶುಕ್ರವಾರ ಬೆಳಿಗ್ಗೆ ದೀಪ ಸ್ಥಾಪನೆಯೊಂದಿಗೆ ಪ್ರಾರಂಭವಾಯಿತು.

ದೇವಸ್ಥಾನದ ಅರ್ಚಕರಾದ ಜಿ.ಲಕ್ಷ್ಮೀನಾರಾಯಣ ಭಟ್, ಡಿ.ಯೋಗೇಶ ಕಾರಂತ್, ಶಿವಾನಂದ ಕೊಡಂಚ, ಸೀತಾರಾಮ ಹೊಳ್ಳ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ಸಂಪನ್ನಗೊಂಡಿತು. ದೇವಸ್ಥಾನದ ಹಿರಿಯ ಆಡಳಿತ ಮೊಕ್ತೇಸರ ಜಿ.ಭಾಸ್ಕರ ಕಲೈಕಾರ್, ದೇವಸ್ಥಾನದ ಅಭಿವೃದ್ಧಿ ಸಮಿತಿ ಸದಸ್ಯರು, ಶ್ರೀ ವರಮಹಾಲಕ್ಷ್ಮೀ ಮಹಿಳಾ ಸಮಿತಿ ಸದಸ್ಯರು, ಭಕ್ತರು ಮೊದಲಾದವರು ಉಪಸ್ಥಿತರಿದ್ದರು. ಆಗಸ್ಟ್ 17ರಂದು ಬೆಳಿಗ್ಗೆ ದೀಪ ವಿಸರ್ಜನೆಯೊಂದಿಗೆ ಏಕಾಹ ಭಜನೆ ಸಮಾಪನಗೊಳ್ಳಿದೆ.
