BlogHighlightsHuman storiesLifestyleLocal newsState newsTop StoriesTrendingWomen Care

ಮೊಳಹಳ್ಳಿ: ಮನೆ ಕಳೆದುಕೊಂಡಿದ್ದ ಮೂರು ಕುಟುಂಬಗಳಿಗೆ ಯುವ ಬಂಟರ ಸಂಘದಿಂದ ಧನ ಸಹಾಯ

Aware others:

ಕುಂದಾಪುರ: ಬುಧವಾರ ರಾತ್ರಿ ಸುರಿದ ನಿರಂತರ ಮಳೆಯಿಂದಾಗಿ ಧರೆಗುರುಳಿದ್ದ  ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮೊಳಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಂಬಳಗದ್ದೆಮನೆ ಪ್ರದೇಶದ ಪ್ರದೀಪ್ ಶೆಟ್ಟಿ, ಗೀತಾ ಶೆಟ್ಟಿ ಹಾಗೂ ಪ್ರೇಮ ಶೆಟ್ಟಿ ಎಂಬುವರ ಕುಟುಂಬಗಳಿಗೆ ಕುಂದಾಪುರ ತಾಲೂಕು ಯುವ ಬಂಟರ ಸಂಘದಿಂದ ತಲಾ 25 ಸಾವಿರ ರೂಪಾಯಿಗಳ ಚೆಕ್ ಗಳನ್ನು ವಿತರಿಸಲಾಯಿತು.

ಈ ಸಂದರ್ಭ ತಾಲೂಕು ಯುವ ಬಂಟರ ಸಂಘದ ಅಧ್ಯಕ್ಷ ಅಂಪಾರು ನಿತ್ಯಾನಂದ ಶೆಟ್ಟಿ, ದಿನೇಶ್ ಹೆಗ್ಡೆ ಮೊಳಹಳ್ಳಿ, ರಮೇಶ್ ಹೆಗ್ಡೆ ಮೊಳಹಳ್ಳಿ, ಯುವ ಮೆರಿಡಿಯನ್ ನ ವಿನಯಕುಮಾರ್ ಶೆಟ್ಟಿ, ಮೊಳಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ್ ಶೆಟ್ಟಿ, ಉಪಾಧ್ಯಕ್ಷೆ ಚೈತ್ರಾ ಅಡಪ, ಮಾಜೀ ಉಪಾಧ್ಯಕ್ಷೆ ವಾಣಿ ಶೆಟ್ಟಿ, ನಿವೃತ್ತ ತೋಟಗಾರಿಕಾ ನಿರ್ದೇಶಕ ಜಯಶೀಲ‌ ಶೆಟ್ಟಿ ಮೊದಲಾದವರು ಉಪಸ್ಥಿತದ್ದರು.


Aware others:

Leave a Reply

Your email address will not be published. Required fields are marked *

error: Content is protected !!