ಕುಂದಾಪುರ: ಚದುರಂಗದಲ್ಲಿ ವೆಂಕಟರಮಣ ಶಾಲೆಯ 7 ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ
ಕುಂದಾಪುರ: ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಕುಂದಾಪುರ, ಇವರ ಸಹಯೋಗದೊಂದಿಗೆ ಸೈಂಟ್ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆ ಕುಂದಾಪುರ ಇಲ್ಲಿ ನಡೆದ ಕುಂದಾಪುರ ವಲಯ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕ- ಬಾಲಕಿಯರ ಚೆಸ್ ಪಂದ್ಯಾಟದಲ್ಲಿ ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ- ಸಿಧ್ವಿಕ್ ಪೂಜಾರಿ (7ಬಿ), ಯು.ವಿಶ್ರುತ್ ಮೇಲಾಡಿ (7ಡಿ), ಸಾತ್ವಿಕ್ ಪೂಜಾರಿ (8ಡಿ), ಹರಿದಾಸ್ ಆರ್.ಮಲ್ಯ (9ಇ), ವರ್ಣಿತಾ ವಿ.ಕುಂದರ್ (9ಎಫ್), ಮೇಘನ ಪ್ರಕಾಶ್ ಶ್ಯಾನಭಾಗ್ (7ಇ), ದೇವಿಕಾ ಶೆಣೈ (8 ಎಫ್) ಇವರು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಶಾಲೆಯ ಆಡಳಿತ ಮಂಡಳಿಯ ಪ್ರಕಟಣೆ ತಿಳಿಸಿದೆ.

