BlogCulturalEntertainmentHighlightsHuman storiesLifestyleLocal newsOthersState newsTop StoriesTrending

ಸಮುದಾಯಗಳ ಬಲವರ್ಧನೆಗೆ ಪ್ರಯತ್ನಿಸಿದಾಗ ಸಂಘಟನೆಗಳ ಉದ್ದೇಶ ಸಾರ್ಥಕವಾಗುತ್ತದೆ ಸಂಸದ ಕೋಟ

Aware others:

ಕುಂದಾಪುರ ತಾಲೂಕು ಬಿಲ್ಲವ ಸಂಘದ ವತಿಯಿಂದ ಸಂಸದರಿಗೆ ಅಭಿನಂದನೆ1

ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ2

ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಗೌರವ ಪುರಸ್ಕಾರ 

ಕುಂದಾಪುರ: ಭಾರತದ ಸಂವಿಧಾನದ ಅಡಿಯಲ್ಲಿ ನಡೆಯುತ್ತಿರುವ ಪ್ರಜಾಪ್ರಭುತ್ವ ವ್ಯವಸ್ಥೆ ಅಡಿಯಲ್ಲಿ ಪ್ರತಿಯೊಂದು ಸಂಘಟನೆಗಳು ಆಯಾ ಸಮುದಾಯಗಳ ಮೂಲಭೂತ ಸಮಸ್ಯೆಗಳು ಮತ್ತು ಆರ್ಥಿಕ ಶೈಕ್ಷಣಿಕ ಅಸಮತೋಲನವನ್ನು ಹೋಗಲಾಡಿಸಿ ಅಂತಹ ಕುಟುಂಬಗಳ ಅಥವಾ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ಹೋರಾಡುವುದೇ ನಿಜವಾದ ಜಾತಿ ಸಂಘಟನೆಗಳ ಕರ್ತವ್ಯ ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಅವರು ಕುಂದಾಪುರದ ನಾರಾಯಣ ಗುರು ಸಭಾಭವನದಲ್ಲಿ ಕುಂದಾಪುರ ತಾಲೂಕು ಬಿಲ್ಲವ ಸಂಘದ ವತಿಯಿಂದ ಉಡುಪಿ ಚಿಕ್ಕಮಗಳೂರು ಸಂಸದರಾಗಿ ಆಯ್ಕೆಯಾದ ಕೋಟ ಶ್ರೀನಿವಾಸ ಪೂಜಾರಿಯವರ ಅಭಿನಂದನ ಸಮಾರಂಭದಲ್ಲಿ ಭಾಗವಹಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಶಿಕ್ಷಣ, ಕೃಷಿ, ಸಾಂಸ್ಕೃತಿಕ, ಸಹಕಾರ, ಕ್ರೀಡೆ, ಸಂಗೀತ, ಕಲಾ ಕ್ಷೇತ್ರದಲ್ಲಿ ಹೀಗೆ ಹಲವು ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಲವರನ್ನು ಗೌರವಿಸಿ ಸನ್ಮಾನಿಸಲಾಯಿತು. ಅಲ್ಲದೆ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ ವಿದ್ಯಾರ್ಥಿನಿಯರನ್ನು ಅಭಿನಂದಿಸಲಾಯಿತು. 

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಅಶೋಕ್ ಪೂಜಾರಿ ಬೀಜಾಡಿ ಮಾತನಾಡಿ, ಮುಂದಿನ ವರ್ಷಕ್ಕೆ ತಾಲೂಕು ಬಿಲ್ಲವ ಸಂಘ 75 ವರ್ಷಗಳನ್ನು ಪೂರೈಸುತ್ತಿದ್ದು ಈ ಸಂದರ್ಭದಲ್ಲಿ ಹಲವು ಕನಸುಗಳನ್ನು ಸಂಗವೂ ಹೊತ್ತುಕೊಂಡಿದೆ ಮುಂದಿನ ಆರು ತಿಂಗಳಲ್ಲಿ ಬಿಲ್ಲವ ಸಮಾಜದ ಸಮೀಕ್ಷೆ ನಡೆಸಿ ಅಂಕಿ ಅಂಶಗಳನ್ನು ಕ್ರೂಢೀಕರಿಸಲಿದ್ದು ಇದಕ್ಕೆ ಸಮಾಜ ಬಾಂಧವರು ಸಹಕರಿಸಬೇಕು ಎಂದು ಕರೆ ನೀಡಿದರು.

ಸಮಾರಂಭದಲ್ಲಿ ಬಿಲ್ಲವ ಸಮಾಜದ ಹಿರಿಯ ನಾಯಕರು ಉಪಸ್ಥಿತರಿದ್ದರು ಅಲ್ಲದೆ ಬೈಂದೂರು ಮತ್ತು ಕುಂದಾಪುರದ ಸಮಾಜ ಬಾಂಧವರು ಹಾಜರಿದ್ದರು. 

  1. ↩︎
  2. ↩︎

Aware others:

Leave a Reply

Your email address will not be published. Required fields are marked *

error: Content is protected !!