ಬನ್ನಾಡಿ- ವಡ್ಡರ್ಸೆ : ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಬಿ. ಪ್ರವೀಣ್ ಹೆಗ್ಡ ಬನ್ನಾಡಿ ಪದಗ್ರಹಣ
ಕುಂದಾಪುರ: ಲಯನ್ಸ್ ಕ್ಲಬ್ ಬನ್ನಾಡಿ-ವಡ್ಡರ್ಸೆ ಇದರ 2024-25 ನೇ ಸಾಲಿನ ಅಧ್ಯಕ್ಷರಾಗಿ ಲಯನ್ ಬಿ. ಪ್ರವೀಣ್ ಹೆಗ್ಡೆ ಬನ್ನಾಡಿ, ಕಾರ್ಯದರ್ಶಿಯಾಗಿ ಲಯನ್ ಬನ್ನಾಡಿ ಅಶಿತ್ ಕುಮಾರ್ ಶೆಟ್ಟಿ, ಕೋಶಾಧಿಕಾರಿಯಾಗಿ ಸೂರ್ಯಕಾಂತ ಶೆಟ್ಟಿ ಆಯ್ಕೆಯಾಗಿದ್ದಾರೆ. ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಶನಿವಾರ “ಬನ್ನಾಡಿ ಸುಬ್ಬಣ್ಣ ಹೆಗ್ಡೆ ಸಭಾ ಭವನದಲ್ಲಿ ಜರುಗಿತು. ಪದಗ್ರಹಣಾಧಿಕಾರಿ ಮಾಜಿ ಜಿಲ್ಲಾ ಗವರ್ನರ್ ಲ.ವಿ.ಜಿ.ಶೆಟ್ಟಿ,ಬಪ್ರಮಾಣ ವಚನ ಭೋಧಿಸಿ ಮಾತನಾಡಿ, ಲಯನ್ಸ್ ಜಿಲ್ಲೆಯಲ್ಲಿ ಇರುವ ಅತ್ಯುತ್ತಮ ಕ್ಲಬ್ ಗಳಲ್ಲಿ ಲಯನ್ಸ್ ಕ್ಲಬ್ ಬನ್ನಾಡಿ ವಡ್ಡರ್ಸೆ ಒಂದಾಗಿದ್ದು, ಅತ್ಯಂತ ಶಿಸ್ತಿನಿಂದ ಶ್ರೇಷ್ಠತೆಯನ್ನು ಕಾಪಾಡಿಕೊಂಡು ಬಂದಿದೆ ಎಂದರು.

ನೂತನ ಸದಸ್ಯರಾದ ರಾಜು ಪೂಜಾರಿ ಬನ್ನಾಡಿ, ದೀಪಕ್ ಶೆಟ್ಟಿ ಬನ್ನಾಡಿ, ಹಾಗೂ ಸುದೇಶ್ ಶೆಟ್ಟಿ ಶಾನಾಡಿಯವರಿಗೆ ಪ್ರಮಾಣವಚನ ಭೋಧಿಸಿದರು. ಈ ಸಂದರ್ಭ ಇತ್ತೀಚೆಗೆ ನಿಧನರಾದ ಲಯನ್ಸ್ ಕ್ಲಬ್ ಮೊಳಹಳ್ಳಿ ಶಿವಶಾಂತಿ ಯ ಹಿರಿಯ ಸದಸ್ಯರಾದ ರತ್ನಾಕರ್ ಶೆಟ್ಟಿಯವರ ಆತ್ಮಕ್ಕೆ ಚಿರಶಾಂತಿ ಕೋರಿ ಹಾಗೂ ವಿಶ್ವ ಶಾಂತಿಗಾಗಿ ಒಂದು ನಿಮಿಷದ ಮೌನ ಪ್ರಾರ್ಥನೆ ಮಾಡಲಾಯಿತು. ಎಸ್.ಎಸ್.ಎಲ್.ಸಿ.ಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದ ವಡ್ಡರ್ಸೆ ಹಾಗೂ ಕಾವಡಿ ಪ್ರೌಢಶಾಲಾ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಬನ್ನಾಡಿ ಸೀತಾರಾಮ ಶೆಟ್ಟಿ, ವಡ್ಡರ್ಸೆಯ ಕಲ್ಕಟ್ಟೆ ಶೀನಪ್ಪ ಶೆಟ್ಟಿ, ಅಚ್ಲಾಡಿ ಚಂದ್ರಶೇಖರ ಶೆಟ್ಟಿ ಹಾಗೂ ಕಾವಡಿ ಶಿವರಾಮ ಶೆಟ್ಟಿ ಯವರನ್ನು ಗೌರವಿಸಲಾಯಿತು. ಲಯನ್ ವಡ್ಡರ್ಸೆ ಬಾಲಕೃಷ್ಣ ಶೆಟ್ಟಿ ಮತ್ತು ನವೀನ್ ಶ್ಯಾನುಭಾಗ್ ರವರನ್ನು ಗುರುತಿಸಲಾಯಿತು. ಅನಾರೋಗ್ಯದಿಂದ ಬಳಲುತ್ತಿರುವ ಬನ್ನಾಡಿ ಸರೋಜಿನಿ ಪೂಜಾರ್ತಿಯವರಿಗೆ ವೈದ್ಯಕೀಯ ನೆರವನ್ನು ನೀಡಲಾಯಿತು.

ನೂತನ ಅಧ್ಯಕ್ಷ ಲ., ಬಿ. ಪ್ರವೀಣ್ ಹೆಗ್ಡೆ “ಎಸ್ಸೆಪ್ಟೆನ್ಸ್ ಸ್ಪೀಚ್” ಮಾಡಿದರು. ನಿಕಟಪೂರ್ವ ಅಧ್ಯಕ್ಷ ಲ. ಸುರೇಂದ್ರ ಶೆಟ್ಟಿ ಕೊಮೆ ಅಚ್ಲಾಡಿ ಇವರು ಅನುಭವಗಳನ್ನು ಹಂಚಿಕೊಂಡರು. ಜಿಲ್ಲಾ ಲಯನ್ಸ್ ನ ಅಂಬಾಸಿಡರ್ ಲ. ಅರುಣ್ ಕುಮಾರ್ ಹೆಗ್ಡೆ, ರೀಜನ್ ಚಯರ್ ಪರ್ಸನ್ ಲ. ವಕೀಲ್ ಬನ್ನಾಡಿ ಸೋಮನಾಥ ಹೆಗ್ಡೆ, ರೀಜನ್ ಸೆಕ್ರೆಟರಿ ಲ. ಕಬ್ಬೈಲ್ ಆನಂದ ಶೆಟ್ಟಿ, ಝೋನ್ ಚಯರ್ ಪರ್ಸನ್ ಲ. ಧರ್ಮರಾಜ್ ಮುದಲಿಯಾರ್ ಜಿಲ್ಲಾ ಕ್ಯಾಬಿನೆಟ್ ಸದಸ್ಯರು, ಲಯನ್ಸ್ ಪದಾಧಿಕಾರಿಗಳು, ವಿವಿಧ ಲಯನ್ಸ್ ಕ್ಲಬ್ ಗಳ ಅಧ್ಯಕ್ಷರು, ಕಾರ್ಯದರ್ಶಿ, ಕೋಶಾಧಿಕಾರಿಗಳು ಹಾಗೂ ಸದಸ್ಯರು ಹಾಗೂ ಕುಟುಂಬ ಸದಸ್ಯರು ಉಪಸ್ಥಿತರಿದ್ದರು.
ಕ್ಲಬ್ ನ ಎಕ್ಟೆನ್ಷನ್ ಚೆಯರ್ ಪರ್ಸನ್ ಲ., ಎಮ್ ದಿನಕರ ಶೆಟ್ಟಿ ಜಿಲ್ಲಾ ಕ್ಯಾಬಿನೆಟ್ ಪದಗ್ರಹಣದ ವಿವರಗಳನ್ನು ಹೇಳಿದರು. ಕ್ಲಬ್ ನ ಸದಸ್ಯ ಲ. ಕಾವಡಿ ಉಲ್ಲಾಸ್ ಶೆಟ್ಟಿ ಪುತ್ರಿ ಕು| ತನಿಸಿ ಉಲ್ಲಾಸ್ ಶೆಟ್ಟಿ ಪ್ರಾರ್ಥಿಸಿದರು. ನಿಕಟ ಪೂರ್ವ ಅಧ್ಯಕ್ಷ ಲ. ಸುರೇಂದ್ರ ಶೆಟ್ಟಿ ಕೊಮೆ ಅಚ್ಲಾಡಿ ಸ್ವಾಗತಿಸಿದರು. ನೂತನ ಕೋಶಾಧಿಕಾರಿ ಲ. ಬನ್ನಾಡಿ ಸೂರ್ಯಕಾಂತ್ ಶೆಟ್ಟಿ ಫ್ಲಾಗ್ ಸೆಲ್ಯುಟೇಷನ್ ನಿರ್ವಹಿಸಿದರು. ಮಾಜಿ ಅಧ್ಯಕ್ಷ ಲ. ವಕೀಲ್ ಕೊತ್ತಾಡಿ ಉದಯ್ ಕುಮಾರ್ ಶೆಟ್ಟಿ ಸಂಸ್ಥೆಯ ನಿಯಮಾವಳಿಗಳನ್ನು ತಿಳಿಸಿದರು. ಲ. ವಡ್ಡರ್ಸೆ ಬಾಲಕೃಷ್ಣ ಶೆಟ್ಟಿ ಪದಗ್ರಹಣಾಧಿಕಾರಿಯವರನ್ನು ಪರಿಚಯಿಸಿದರು. ಸ್ಥಾಪಕ ಕಾರ್ಯದರ್ಶಿ ಲ. ಫ್ರೊ. ಕಲ್ಕಟ್ಟೆ ಚಂದ್ರಶೇಖರ್ ಶೆಟ್ಟಿ ನೂತನ ಅಧ್ಯಕ್ಷರನ್ನು ಪರಿಚಯಿಸಿದರು. ಲ. ಬನ್ನಾಡಿ ಸಂತೋಷ್ ಶೆಟ್ಟಿ (TCB), ಲ. ರಾಜಾರಾಮ್ ಶೆಟ್ಟಿ ಕಲ್ಕಟ್ಟೆ, , ಲ. ಅಜಿತ್ ಶೆಟ್ಟಿ ಕೊತ್ತಾಡಿ ಸದಸ್ಯರನ್ನು ಪರಿಚಯಿಸಿದರು. ನೂತನ ಕಾರ್ಯದರ್ಶಿ ಲ. ಬನ್ನಾಡಿ ಅಶಿತ್ ಕುಮಾರ್ ಶೆಟ್ಟಿ ವಂದಿಸಿದರು. ಸಂಸ್ಥೆಯ ಸ್ಥಾಪಕ ಕಾರ್ಯದರ್ಶಿ ಲ. ಪ್ರೊ| ಕಲ್ಕಟ್ಟೆ ಚಂದ್ರ ಶೇಖರ ಶೆಟ್ಟಿ ಹಾಗೂ ಮಾಜಿ ಆಧ್ಯಕ್ಷ ಲ. ಕಲ್ಕಟ್ಟೆ ರಾಜಾರಾಮ್ ಶೆಟ್ಟಿ ನಿರೂಪಿಸಿದರು.
