ಗಂಗೊಳ್ಳಿ: ಪೇಟೆ ಶ್ರೀವಿಠಲ ರಕುಮಾಯಿ ತಥಾ ಮುಖ್ಯಪ್ರಾಣ ದೇವಸ್ಥಾನದಲ್ಲಿ ಏಕಾದಶಿ
ಗಂಗೊಳ್ಳಿ : ಗಂಗೊಳ್ಳಿಯ ಪೇಟೆ ಶ್ರೀವಿಠಲ ರಕುಮಾಯಿ ತಥಾ ಮುಖ್ಯಪ್ರಾಣ ದೇವಸ್ಥಾನದಲ್ಲಿ ಆಷಾಢ ಏಕಾದಶಿ ಪ್ರಯುಕ್ತ ವಿಶೇಷ ಪೂಜೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರಗಿತು.

ಆಷಾಢ ಏಕಾದಶಿ ಅಂಗವಾಗಿ ಬುಧವಾರ ಸಂಜೆ ಅಭಿಷೇಕ, ವಿಶೇಷ ಪುಷ್ಪಾಲಂಕಾರ ಸೇವೆ, ಮಹಾಪೂಜೆ, ಪ್ರಸಾದ ವಿತರಣೆ, ರಾತ್ರಿ ಏಕಾದಶಿ ಭಜನೆ, ಏಕಾದಶಿ ಪೂಜೆ, ಜಾಗರಣೆ ಭಜನೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ದೇವಸ್ಥಾನದ ಪ್ರಧಾನ ಅರ್ಚಕ ಜಿ.ಮೋಹನದಾಸ ಭಟ್ ಮತ್ತು ಜಿ.ಪ್ರದೀಪ ಭಟ್ ನೇತೃತ್ವದಲ್ಲಿ ನಡೆಯಿತು.
ಯು.ಸದಾನಂದ ಮಾಧವ ಪೈ ಮತ್ತು ಕುಟುಂಬಸ್ಥರು, ಶ್ರೀ ವಿಠಲ ರಕುಮಾಯಿ ಸೇವಾ ಸಮಿತಿ ಹಾಗೂ ಹತ್ತು ಸಮಸ್ತರು ಸೇವೆಯನ್ನು ಸಮರ್ಪಿಸಿದರು. ಇಂದು ಲಕ್ಷ ಪ್ರದಕ್ಷಿಣೆ ಸೇವೆಯ ಮಂಗಲಾಚರಣೆ ನಡೆಯಿತು. ಮಧ್ಯಾಹ್ನ ದೇವರಿಗೆ ವಿಶೇಷ ಪೂಜೆ, ಪುನಸ್ಕಾರ, ಮಹಾಸಮಾರಾಧನೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಂಡಿತು. ದಿ.ಸುಲೋಚನಾ ಸುಬ್ರಾಯ ಶೆಣೈ ಸ್ಮರಣಾರ್ಥ ಮಕ್ಕಳು ಸೇವೆಯನ್ನು ಸಮರ್ಪಿಸಿದರು. ದೇವಳದ ಆಡಳಿತ ಮಂಡಳಿ ಸದಸ್ಯರು, ಪುರೋಹಿತರು, ಹತ್ತು ಸಮಸ್ತರು ಹಾಗೂ ಸಮಾಜಬಾಂಧವರು ಉಪಸ್ಥಿತರಿದ್ದರು
