ಕುಂದಾಪುರ: ಲಯನ್ಸ್ ಕ್ಲಬ್ ಕುಂದಾಪುರ ಅಮೃತಧಾರಾ ಪದಪ್ರದಾನ
ಕುಂದಾಪುರ: ಲಯನ್ಸ್ ಕ್ಲಬ್ ಕುಂದಾಪುರ ಅಮೃತಧಾರಾ ಪದಾಧಿಕಾರಿಗಳ ಪದಪ್ರದಾನ ಕಾರ್ಯಕ್ರಮ ಹಂಗಳೂರು ಶ್ರೀ ಕೃಷ್ಣ ಸಭಾಗ್ರಹದಲ್ಲಿ ಜರುಗಿತು. ಮಾಜಿ ಜಿಲ್ಲಾ ಗವರ್ನರ್ ನೀಲಕಾಂತ್ ಎಂ ಹೆಗಡೆ ಪದಪ್ರದಾನ ನಡೆಸಿ ಶುಭಹಾರೈಸಿದರು. ನೂತನ ಅಧ್ಯಕ್ಷರಾಗಿ ಡಾ. ವಾಣಿಶ್ರೀ ಐತಾಳ್ ಕಾರ್ಯದರ್ಶಿಯಾಗಿ ಡಾ. ಶಿಲ್ಪಾ ಶೈಲೇಶ್ ರಾವ್, ಖಜಾಂಜಿಯಾಗಿ ಅಮೃತ ಬನವಾಲಿಕರ್ ಅಧಿಕಾರ ಹಸ್ತಾಂತರಿಸಲಾಯಿತು. ಇದೇ ಸಂದರ್ಭ ಪ್ರತಿಭಾನ್ವಿತ ಭರತನಾಟ್ಯ ಕಲಾವಿದೆ ಯುಕ್ತಿ ಉಡುಪ ಹಾಗೂ ಸಾಮಾಜಿಕ ಚಟುವಟಿಕೆಗೆ ತೊಡಗಿಸಿಕೊಂಡಿರುವ ಕುಂದಾಪುರದ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಸದಸ್ಯರಾದ ಗಣೇಶ್ ಆಚಾರ್ಯ.ಕೆ ಹಾಗೂ ಯು.ಶಂಕರ ಶೆಟ್ಟಿಯವರನ್ನು ಗೌರವಿಸಲಾಯಿತು.

ಲಯನ್ಸ್ ಕ್ಲಬ್‌ನ ಜಿಲ್ಲಾ ರಾಯಭಾರಿ ಅರುಣ್ ಕುಮಾರ್ ಹೆಗ್ಡೆ, ಪ್ರಾಂತೀಯ ಅಧ್ಯಕ್ಷ ಬನ್ನಾಡಿ ಸೋಮನಾಥ ಹೆಗ್ಡೆ, ಪ್ರಾಂತೀಯ ಕಾರ್ಯದರ್ಶಿ ಆನಂದ್ ಶೆಟ್ಟಿ, ವಲಯಾಧ್ಯಕ್ಷ ಬಾಲಕೃಷ್ಣ ಶೆಟ್ಟಿ,ವಿಸ್ತರಣಾಧಿಕಾರಿ ಅಕ್ಷಯ್ ಹೆಗ್ಡೆ, ನೂತನ ಕಾರ್ಯದರ್ಶಿ ಶಿಲ್ಪ ಶೈಲೇಶ್, ನಿಕಟ ಪೂರ್ವ ಕಾರ್ಯದರ್ಶಿ ಸುಮಶ್ರೀ ಧನ್ಯ, ನಿಕಟಪೂರ್ವ ಕೋಶಾಧಿಕಾರಿ ಕಲ್ಷನಾ ಭಾಸ್ಕರ್ ಲಯನ್ಸ್ ಜಿಲ್ಲೆ 317ರ ಸಂಪುಟ ಸದಸ್ಯರು, ಲಯನ್ಸ್ ಕ್ಲಬ್ ಕುಂದಾಪುರ ಅಮೃತಧಾರಾ ಪದಾಧಿಕಾರಿಗಳು, ಸದಸ್ಯರು, ರೋಟರಿ ಸದಸ್ಯರು, ಆಹ್ವಾನಿತರು ಉಪಸ್ಥಿತರಿದ್ದರು. ನಿಕಟಪೂರ್ವ ಅಧ್ಯಕ್ಷೆ ಆಶಾ ಶಿವರಾಮ ಶೆಟ್ಟಿ ಸ್ವಾಗತಿಸಿದರು, ಶಿಲ್ಪ ಶೈಲೇಶ್ ವಂದಿಸಿ ಚಂದ್ರಿಕಾ ಧನ್ಯ ನಿರೂಪಿಸಿದರು.
