ಬ್ರಹ್ಮಾವರದಲ್ಲಿ ನೆರೆ : ಗೃಹರಕ್ಷಣಾ ಘಟಕದಿಂದ ಹಸುಗೂಸು,ಬಾಣಂತಿ ಸಹಿತ 14 ಜನರ ರಕ್ಷಣೆ
ಬ್ರಹ್ಮಾವರ: ಕಳೆದೆರೆಉ ದಿನಗಳಿಂದ ಸುರಿಯುತ್ತಿರುವ ರಣಭೀಕರ ಮಳೆಗೆ ಹಿಂದೆಂದೂ ಕಾಣದಷ್ಟು ನೆರೆ ಭೀತಿ ಉಂಟಾಗಿದೆ. ಬ್ರಹ್ಮಾವರ ತಾಲೂಕಿನ ಆರೂರು ಗ್ರಾಮದ ಬೆಳ್ಮಾರು ಪ್ರದೇಶದಲ್ಲಿ ನೆರೆಯಿಂದಾಗಿ ಜಲ ದಿಗ್ಭಂಧನ ಉಂಟಾಗಿದ್ದು, ಸಂತ್ರಸ್ಥರ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ.ಬ್ರಹ್ಮಾವರ ತಾಲೂಕಿನ ಆರೂರು ಗ್ರಾಮದ ಬೆಳ್ಮಾರು ಪ್ರದೇಶದಲ್ಲಿ ನೆರೆಯಿಂದಾಗಿ ಜಲ ದಿಗ್ಭಂಧನ ಉಂಟಾಗಿದ್ದು, ಸಂತ್ರಸ್ಥರ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ.
ಬ್ರಹ್ಮಾವರದ ತಹಶೀಲ್ದಾರ್ ಶ್ರೀಕಾಂತ್ ಹೆಗ್ಡೆ ನೇತೃತ್ವದಲ್ಲಿನಡೆದ ರಕ್ಷಣಾ ಕಾರ್ಯಾಚರಣೆಯಲ್ಲಿ ಬ್ರಹ್ಮಾವರ ಗೃಹರಕ್ಷಕದಳದ ಘಟಕಾಧಿಕಾರಿ ಸ್ಟೀವನ್ ಪ್ರಕಾಶ್ ಹಾಗೂ ಸಿಬ್ಬಂದಿಗಳಾದ ಅಖಿಲೇಶ್, ವಿಜಯ್ ಕುಮಾರ್, ಕಾರ್ತಿಕ್ ಶಾಮ್ ಹಾಗೂ ಚಂದ್ರ ಮೊದಲಾದವರು ನೆರೆಪೀಡಿತ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿ, ಒಂದು ತಿಂಗಳ ಹಸುಗೂಸು, ಬಾಣಂತಿ ಸಹಿತ 14 ಜನರನ್ನು ರಕ್ಷಣೆ ಮಾಡಿದ್ದಾರೆ.
