ಉಡುಪಿ: ಗರುಡ ಗ್ಯಾಂಗ್ ನಲ್ಲಿ ಭಿನ್ನಮತ – ಸಿನೀಮಿಯ ರೀತಿಯ ಗ್ಯಾಂಗ್ ವಾರ್! ಎಂಟು ಆರೋಪಿಗಳು ಜೈಲಿಗೆ!
ವಾರದ ಹಿಂದಿನ ಹೊಡೆದಾಟದ ವಿಡಿಯೋ ವೈರಲ್

ಉಡುಪಿ: ಕಳೆದ ಶನಿವಾರ ರಾತ್ರಿ ಎರಡು ಕಾರುಗಳಲ್ಲಿ ಬಂದ ದುಷ್ಕರ್ಮಿಗಳು ಪರಸ್ಪರ ತಲ್ವಾರ್ ದಾಳಿ ನಡೆಸಿದ್ದು, ಒಬ್ಬ ಗಂಭೀರಗೊಂಡ ಘಟನೆ ವಾರದ ಬಳಿಕ ಬೆಳಕಿಗೆ ಬಂದಿದೆ. ಸಿನೀಮೀಯ ರೀತಿಯ ಹೊಡೆದಾಟದ ವಿಡಿಯೋವೊಂದು ವಾರದ ಬಳಿಕ ವೈರಲ್ಲಾಗುವ ಮೂಲಕ ಪ್ರಕರಣ ಬೆಳಕಿಗೆ ಬಂದಿದೆ. ಉಡುಪಿ ನಗರದ ಕುಂಜಿಬೆಟ್ಟು ರಸ್ತೆಯಲ್ಲಿ ಮೇ 18ರಂದು ಘಟನೆ ನಡೆದಿದ್ದು, ಗ್ಯಾಂಗ್ ವಾರ್ ನಲ್ಲಿ ಒಬ್ಬನ್ನು ಕಾರು ನುಗ್ಗಿಸಿ ಕೊಲೆಯತ್ನ ಮಾಡಲಾಗಿದೆ ಎನ್ನಲಾಗಿದೆ.

ಕಾರು ವ್ಯಾಪಾರದ ವಿಚಾರದಲ್ಲಿ ಕಾಪು ಮೂಲದ ಗರುಡ ಗ್ಯಾಂಗಿನಲ್ಲಿ ಭಿನಮತ ತಲೆದೋರಿತ್ತು ಎನ್ನಲಾಗಿದೆ. ಅದು ವೈಷಮ್ಯಕ್ಕೆ ತಿರುಗಿತ್ತು. ಮೇ 18ರಂದು ಉಡುಪಿಯ ಕುಂಜಿಬೆಟ್ಟಿನಲ್ಲಿ ಎರಡೂ ತಂಡಗಳು ಕಾರಿನಲ್ಲಿ ಮುಖಾಮುಖಿಯಾಗಿದ್ದು, ತಂಡಗಳ ನಡುವೆ ವಾರ್ ಆರಂಭಗೊಂಡಿದೆ. ವಿಡಿಯೋದಲ್ಲಿ ಈ ದೃಶ್ಯಗಳು ಸೆರೆಯಾಗಿದ್ದು, ತಲ್ವಾರ್ ಹಿಡಿದುಕೊಂಡಿದ್ದ ರೌಡಿಗಳು ರಸ್ತೆ ನಡುವಲ್ಲಿಯೇ ಹೊಡೆದಾಟ ಆರಂಭಿಸಿದ್ದಾರೆ. ಬಳಿಕ ಒಂದು ಕಾರಿನಲ್ಲಿದ್ದಾತ ಇನ್ನೊಂದು ತಂಡದ ರೌಡಿಗೆ ಡಿಕ್ಕಿ ಹೊಡೆದು ರಸ್ತೆಗೆ ಬೀಳಿಸಿದ್ದಾನೆ. ಅಷ್ಟಕ್ಕೂ ಸುಮ್ಮನಾಗದ ರೌಡಿಗಳು ನಡುರಸ್ತೆಯಲ್ಲಿ ಬಿದ್ದಾತನಿಗೆ ತಲವಾರಿನಿಂದ ಕಡಿದಿದ್ದಾರೆ. ರಸ್ತೆಯಲ್ಲಿ ಬಿದ್ದಾತನ ಕಡೆಯವರು ಆತನನ್ನು ಕಾರಿನಲ್ಲಿ ತುಂಬಿಸಿಕೊಂಡು ಓಡಿಹೋಗಿದ್ದಾರೆ ಎನ್ನಲಾಗಿದೆ.

ಗಾಯಗೊಂಡವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಎಂಟು ಆರೋಪಿಗಳನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಎಲ್ಲರಿಗೂ ನ್ಯಾಯಾಂಗ ಬಂದನ ವಿಧಿಸಿದೆ ಎಂದು ತಿಳಿದುಬಂದಿದೆ.
ವಿಡಿಯೋ ನೋಡಲು ಇಲ್ಲಿ ಕ್ಲಿಕ್ಕಿಸಿ 👇
https://youtu.be/oNDiPGIsSlU?si=s-3XfVVxcRoiAec-
