ಉಡುಪಿ ಗರುಡ ಗ್ಯಾಂಗ್ : ವಿಡಿಯೋ ವೈರಲ್ ಬಳಿಕ ಎಚ್ಚೆತ್ತ ಪೊಲೀಸ್, ಮತ್ತೆ ಮೂವರ ಬಂಧನ

ಉಡುಪಿ: ಉಡುಪಿ-ಮಣಿಪಾಲ ರಾಷ್ಟ್ರೀಯ ಹೆದ್ದಾರಿಯ ಕುಂಜಿಬೆಟ್ಟು ರಸ್ತೆಯಲ್ಲಿ ಮೇ 18ರಂದು ನಡೆದ ಗ್ಯಾಂಗ್ ವಾರ್ ವಿಡಿಯೋ ವೈರಲ್ ಬಳಿಕ ಉಡುಪಿ ಪೊಲೀಸ್ ಅಲರ್ಟ್ ಆಗಿದೆ. ಪರಿಣಾಮವಾಗಿ ಮತ್ತೆ ಮೂವರನ್ನು ಪೊಲೀಸರು ಬಂಧಿಸಿರುವ ಮಾಹಿತಿ ಲಭಿಸಿದೆ. ಸದ್ಯ ಒಟ್ಟು ಆರು ಆರೋಪಿಗಳನ್ನು ಬಂಧಿಸಿದಂತಾಗಿದೆ.
ಬಂಧಿತರನ್ನು ಗರುಡ ಗ್ಯಾಂಗ್ ನ ಮಜೀದ್, ಅಲ್ಪಾಝ್, ಶರೀಫ್ ಎಂದು ಗುರುತಿಸಲಾಗಿದೆ. ಈ ಪ್ರಕರಣದಲ್ಲಿ ಮೇ 20ರಂದು ಪ್ರಮುಖ ಆರೋಪಿ ಕಾಪು ಕೊಂಬಗುಡ್ಡೆ ಮೂಲದ ಆಶಿಕ್(26), ತೋನ್ಸೆ ಹೂಡೆಯ ರಾಕೀಬ್(21) ಹಾಗೂ ಮೇ 25ರಂದು ಸಕ್ಸೆನ್(26) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಮೂವರಲ್ಲಿ ವಿಡಿಯೋದಲ್ಲಿ ಕಾಣುವ ಕಾರು ಢಿಕ್ಕಿ ಹೊಡೆದು ಗಾಯಗೊಂಡ ಶರೀಫ್ ಎಂಬಾತ ಕೂಡ ಇದ್ದಾನೆ. ಈತನಿಗೆ ಗಾಯಗಳಾಗಿದ್ದು, ಈಗಾಗಲೇ ಚಿಕಿತ್ಸೆ ಪಡೆದುಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
