BlogEntertainmentHighlightsLifestyleLocal newsNational NewsOthersState newsTop StoriesTrendingWomen Care

ಅಕ್ಷಯ ತೃತೀಯಕ್ಕೆ ಜ್ಯೋತಿ ರೈ ನೀಡಿದ ಗಿಪ್ಟ್ ಏನ್ ಗೊತ್ತಾ?

Aware others:

ಸ್ಯಾಂಡಲ್ ವುಡ್ ನಲ್ಲಿ ಹೆಸರು ಮಾಡಿದ ಜ್ಯೋತಿ ರೈ ಸೋಷಿಯಲ್ ಮೀಡಿಯಾದಲ್ಲಿ ದಿನವೂ ಸಂಚಲನ ಸೃಷ್ಟಿಸ್ತಿದಾರೆ. ಆದರೆ ಜ್ಯೋತಿ ರೈ ಈ ಅಕ್ಷಯ ತೃತೀಯ ದಿನ ಚಿನ್ನ ಖರೀದಿಯ ಬದಲು ದರ್ಶನಂ ಮೊಗಿಲಯ್ಯ ಅವರಿಗೆ ಭರ್ಜರಿ ಗಿಪ್ಟ್ ನೀಡುವ ಮೂಲಕ ಅಭಿಮಾನಿಗಳಿಂದ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ.

ಜ್ಯೋತಿ ರೈ ಕೂಡ ಅಕ್ಷಯ ತೃತೀಯ ದಿನ ಚಿನ್ನ ಖರೀದಿ ಮಾಡಬಹುದಿತ್ತು. ಆದರೆ ತಮ್ಮಲಿರೋ ದುಡ್ಡಿನಲ್ಲಿ 50 ಸಾವಿರ ರೂಪಾಯಿನ್ನ ಅವಶ್ಯ ಇರೋ ಕಲಾವಿದನಿಗೆ ಕೊಟ್ಟಿದ್ದಾರೆ. ಪದ್ಮಶ್ರೀ ಪುರಸ್ಕೃತ ಹಾಗೂ 12 ಹಂತದ ಕಿನ್ನರ ಕಲಾವಿದ ದರ್ಶನಂ ಮುಗಿಲಯ್ಯ ಅವರಿಗೆ ಈ 50 ಸಾವಿರ ರೂಪಾಯಿ ನಗದು ಹಣ ಕೊಟ್ಟಿದ್ದಾರೆ.

ಆರ್ಥಿಕ ಸಹಾಯ ಪಡೆದ ಮುಗಿಲಯ್ಯ ಅವರು, “ನೀವು ಎಷ್ಟು ಸುಂದರವಾಗಿ ಇದ್ದಿರೋ ಅಷ್ಟೇ ನಿಮ್ಮ ಮನಸು ಸುಂದರವಾಗಿಯೇ ಇದೆ” ಎಂದು ಹೇಳಿದ್ದಾರೆ.

ಜ್ಯೋತಿ ರೈ ಈ ವಿಡಿಯೋವನ್ನ ತಮ್ಮ ಸೋಷಿಯಲ್ ಮೀಡಿಯಾ ಪೇಜ್ನಲ್ಲೂ ಹಂಚಿಕೊಂಡಿದ್ದಾರೆ. ಒಂದಷ್ಟು ವಿಚಾರಗಳನ್ನೂ ಬರೆದುಕೊಂಡಿದ್ದಾರೆ. ಕಿನ್ನರ ಕಲಾವಿದ ದರ್ಶನಂ ಮೊಗಿಲಯ್ಯ ಅವರು ಆರ್ಥಿಕವಾಗಿ ತೊಂದರೆಯಲ್ಲಿದ್ದರು. ಇವರ ಈ ವಿಚಾರ ತಿಳಿದು ಸಹಾಯ ಮಾಡ್ಬೇಕು ಅನ್ನೋ ಭಾವನೆ ಮನದಲ್ಲಿ ಮೂಡಿತು.

ಆ ಕ್ಷಣವೇ ಈ ಒಂದು ಒಳ್ಳೆಯ ಕೆಲಸವನ್ನ ಮಾಡಿದ್ದೇನೆ. ಊಟದ ವ್ಯವಸ್ಥೆ ಕೂಡ ಮಾಡಿ ಆರ್ಥಿಕ ಸಹಾಯಕ ಕೂಡ ಮಾಡಿದ್ದೇನೆ. ಇನ್ನೂ ಜಾಸ್ತಿ ಸಹಾಯ ಮಾಡೋ ಮನಸು ಕೂಡ ಇದೆ. ಯಾರಾದ್ರೂ ಇವರಿಗೆ ಸಹಾಯ ಮಾಡೋದಾದ್ರೆ ಮುಂದೆ ಬನ್ನಿ ಅಂತಲೂ ಜ್ಯೋತಿ ರೈ ಬರೆದುಕೊಂಡಿದ್ದಾರೆ.

ಆ ಮೂಲಕ ಇಲ್ಲದ ಸಲ್ಲದ ವಿಡಿಯೋಗಳನ್ನ ವೈರಲ್ ಮಾಡ್ತೀರಾ..? ಆದರೆ ಈ ಒಂದು ಒಳ್ಳೆ ಕೆಲಸದ ವಿಡಿಯೋವನ್ನ ಯಾಕೆ ವೈರಲ್ ಮಾಡೋದಿಲ್ಲ. ಆ ಧೈರ್ಯ ಇಲ್ವೇ ? ಅಂತಲೂ ಜ್ಯೋತಿ ರೈ ಪ್ರಶ್ನೆ ಮಾಡಿದ್ದಾರೆ. ಕಾರಣ, ಅವರದಲ್ಲದ ವಿಡಿಯೋ ವೈರಲ್ ಮಾಡಿರೋರಿಗೆ ಜ್ಯೋತಿ ರೈ ಸರಿಯಾಗಿಯೇ ತಿರುಗೇಟು ನೀಡಿದ್ದಾರೆ.

ವೀಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ 👇


Aware others:

Leave a Reply

Your email address will not be published. Required fields are marked *

error: Content is protected !!