BlogEducationHighlightsLocal newsNational NewsOthersState newsSuccess storiesTrendingWomen Care

ಎಸ್ಸೆಸ್ಸೆಲ್ಸಿ : ಉಪ್ಪುಂದಕ್ಕೆ 91.79% – ನಾಗಶ್ರೀ ಫಸ್ಟ್

Aware others:

ಉಪ್ಪುಂದ: 2023-24ನೇ ಸಾಲಿನ ಎಸ್ಸೆಸ್ಸೆಲ್ಸಿಯಲ್ಲಿ ಉಪ್ಪುಂದದ ಸರ್ಕಾರೀ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗ ಸರಾಸರಿ 91.70% ಫಲಿತಾಂಶ ಪಡೆದಿದೆ.

ನಾಗಶ್ರೀ 600 ಅಂಕಗಳನ್ನು ಪಡೆದು ಶಾಲೆಗೆ ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿದ್ದಾಳೆ. ಉಳಿದಂತೆ ಅಮೂಲ್ಯ 594, ಪ್ರಥ್ವಿ 584, ಸೃಷ್ಟಿ 583, ರಿತು 582, ಜಾಹ್ನವಿ 580, 

ಸುಚಿತ್ರಾ 578, ತನುಶ್ರೀ 575, ರಾಘವೇಶ್ 574, ಶಮಂತ್ 569 ಪೆರದ ಟಾಪ್ 10 ಆಗಿ ಹೊರಹೊಮ್ಮಿದ್ದಾರೆ.

ಪ್ರೌಢ ಶಾಲಾ ವಿಭಾಗದಲ್ಲಿ ಆಂಗ್ಲ ಮಾಧ್ಯಮದಲ್ಲಿ 112 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 109 ವಿದ್ಯಾರ್ಥಿಗಳು ತೇರ್ಗಡೆಯಾಗಿ 97.33% ಫಲಿತಾಂಶ ಬಂದಿದೆ. ಇನ್ನು ಕನ್ನಡ ಮಾಧ್ಯಮದಲ್ಲಿ  83 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 70  ವಿದ್ಯಾರ್ಥಿಗಳು ಉತ್ತೀರ್ಣರಾಗಿ 84.33% ಫಲಿತಾಂಶ ಬಂದಿದೆ. ಒಟ್ಟಾರೆ ಫಲಿತಾಂಶ ಗಮನಿಸಿದಾಗ ಆಂಗ್ಲಮಾಧ್ಯಮ ವಿದ್ಯಾರ್ಥಿಗಳು ಇಲ್ಲಿ ಮೇಲುಗೈ ಸಾಧಿಸಿದ್ದಾರೆ. ಶಾಲಾ ಶಿಕ್ಷಕ ವರ್ಗ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ್ದಾರೆ.


Aware others:

Leave a Reply

Your email address will not be published. Required fields are marked *

error: Content is protected !!