BlogEducationHighlightsLocal newsOthersState newsTop StoriesTrending

ಕುಂದಾಪುರ: ಎಕ್ಸಲೆಂಟ್ ಮತ್ತು ಲಿಟ್ಲ್ ಸ್ಟಾರ್ ಆಂಗ್ಲ ಮಾದ್ಯಮ ಶಾಲೆಗೆ ಎಸ್. ಎಸ್.ಎಲ್.ಸಿಯಲ್ಲಿ ಶೇ.100 ಫಲಿತಾಂಶ

Aware others:

ಹಲವು ರಾಜ್ಯ ಮಟ್ಟದ ರ್ಯಾಂಕ್

ಕುಂದಾಪುರ: ಇಲ್ಲಿನ ಎಕ್ಸಲೆಂಟ್ ಮತ್ತು ಲಿಟ್ಲ್ ಸ್ಟಾರ್ ಆಂಗ್ಲ ಮಾಧ್ಯಮ ಶಾಲೆಯು ಎಸ್ಸೆಸ್ಸೆಲ್ಸಿಯಲ್ಲಿ ಶೇ. 100 ಫಲಿತಾಂಶ ದಾಖಲಿಸಿದೆ. 

ಪ್ರಥ್ವಿತಾ ಪಿ ಶೆಟ್ಟಿ 621 ಅಂಕ ಪಡೆದು ರಾಜ್ಯ ಮಟ್ಟದಲ್ಲಿ 5ನೇ ರ್ಯಾಂಕ್ ಗಳಿಸಿ ಕುಂದಾಪುರ ತಾಲೂಕಿಗೆ ಪ್ರಥಮ ಸ್ಥಾನ ಪಡೆದವರಲ್ಲಿ ಒಬ್ಬರಾಗಿದ್ದಾರೆ. ಸಾಧನಾ ದೇವಾಡಿಗ 616 ಅಂಕ ಗಳಿಸಿ10ನೆಯ ರ್ಯಾಂಕ್ ಗಳಿಸಿದ್ದಾರೆ. 

ಬಸನಗೌಡ ಪಾಟೀಲ್ 610 ಕೆ ಶ್ರೀಶ ಶೆಟ್ಟಿ 610 ನಿಝಾ 608 ಸನ್ನಿಧಿ 606 ಸುಶ್ಮಿತಾ ಸುಖಾಲಿ 605 ದಿವಿತ್ ಕುಮಾರ್ ಶೆಟ್ಟಿ 602 ಸೃಜನ್ ಜೆ ಶೆಟ್ಟಿ 601 ಐಶ್ವರ್ಯ ಬಿ ಆಚಾರ್ಯ 591 ಸನ್ಸಿತ 588 ಸಂಧಿಪ್ ರೆಡ್ಡಿ ವಿ 587 ವಿದ್ಯಾಶ್ರೀ 585 ಕೃತಿ ಕೆ ಶೆಟ್ಟಿ 582 ಲತಿಕಾ 581 ಅಂಕಗಳನ್ನು ಪಡೆದಿದ್ದಾರೆ. 

ಸಂಸ್ಥೆಯಲ್ಲಿ ಪರೀಕ್ಷೆ ಬರೆದ 79 ವಿದ್ಯಾರ್ಥಿಗಳ ಪೈಕಿ 38 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 40 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ,ಹಾಗೂ ಒಂದು ವಿದ್ಯಾರ್ಥಿ ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ.

ವಿದ್ಯಾರ್ಥಿಗಳ ಈ ಅದ್ಭುತಪೂರ್ವ ಸಾಧನೆಗೆ ಎಂ ಎಂ ಹೆಗ್ಡೆ ಎಜುಕೇಶನಲ್ ಅಂಡ್ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಎಂ ಮಹೇಶ್ ಹೆಗ್ಡೆ, ಸುಜ್ಞಾನ ಎಜುಕೇಶನಲ್ ಟ್ರಸ್ಟ್ ನ ಅಧ್ಯಕ್ಷ ಡಾ. ರಮೇಶ್ ಶೆಟ್ಟಿ, ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ, ಖಜಾಂಜಿ ಭರತ್ ಶೆಟ್ಟಿ ಹಾಗೂ ಮುಖ್ಯೋಪಾಧ್ಯಾಯ ಪ್ರದೀಪ್ ಶೆಟ್ಟಿ, ಹಾಗೂ ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷಕ ವರ್ಗ ಸಂತಸ ವ್ಯಕ್ತಪಡಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ್ದಾರೆ,


Aware others:

Leave a Reply

Your email address will not be published. Required fields are marked *

error: Content is protected !!