BlogEducationHighlightsLocal newsOthersState newsTop StoriesTrending

ತೆಕ್ಕಟ್ಟೆ ಜ್ಯೂನಿಯರ್ ಕಾಲೇಜಿನ ಪ್ರೌಢಶಾಲಾ ವಿಭಾಗದ ಎಸ್ಸೆಸ್ಸೆಲ್ಸಿಗೆ ಶೇ.90 ಫಲಿತಾಂಶ

Aware others:

ಖಾಸಗೀ ಶಾಲೆಗಳಿಗೆ ಸವಾಲೆಸೆದ ಸರ್ಕಾರೀ ಶಾಲಾ ಮಕ್ಕಳು

ಕುಂದಾಪುರ: 2023-24ರ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ  ಸರ್ಕಾರಿ ಪದವಿಪೂರ್ವ ಕಾಲೇಜು ತೆಕ್ಕಟ್ಟೆ ಪ್ರೌಡ ಶಾಲಾ ವಿಭಾಗ ಶೇ. 90 ಫಲಿತಾಂಶ ಗಳಿಸಿದೆ.

ಕುಮಾರಿ ರಶ್ಮಿತಾ 597 ಅಂಕಗಳನ್ನು ಪಡೆದು ಶೇ. 95.57 ಫಲಿತಾಂಶ ಪಡೆದುಕೊಂಡಿದ್ದಾಳೆ. ಕುಮಾರಿ ತೃಪ್ತಿ 583 ಅಂಕಗಳನ್ನು ಪಡೆದು ಶೇ. 93.28, ಕುಮಾರಿ ಸಮೃದ್ದಿ 581 ಅಂಕಗಳನ್ನು ಪಡೆದು ಶೇ. 92.96 ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಒಟ್ಟು 4 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ, 11 ವಿಧ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಹಾಗೂ

20ಕ್ಕಿಂತ ಹೆಚ್ಚು ವಿಧ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. ಶಾಲೆಗೆ ಕೀರ್ತಿ ತಂದ ಎಲ್ಲಾ ವಿದ್ಯಾರ್ಥಿಗಳಿಗೆ ಶಾಲಾ ಮುಖ್ಯೋಪಾದ್ಯಾಯರು ಹಾಗೂ ಬೋಧಕವರ್ಗ ಶುಭ ಹಾರೈಸಿದ್ದಾರೆ.

ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸರ್ಕಾರೀ ಶಾಲೆಗಳು ಖಾಸಗೀ ಮತ್ತು ಆಂಗ್ಲಮಾಧ್ಯಮ ಶಾಲೆಗಳಿಗೆ ಸ್ಪರ್ಧೆ ನೀಡಿರುವುದು ಕಂಡು ಬಂದಿದ್ದು, ಖಾಸಗೀ ಶಾಲೆಗಳಿಗೆ ಸೆಡ್ಡು ಹೊಡೆದಿವೆ. ಇದಕ್ಕೆ ಪೂರಕವೆಂಬಂತೆ ಬಾಗಲಕೋಟೆಯ ಮೊರಾರ್ಜಿ ದೇಸಾಯಿ ಶಾಲೆಯ ವಿದ್ಯಾರ್ಥಿನಿ ರಾಜ್ಯಕ್ಕೇ ಪ್ರಥಮ ಸ್ಥಾನಿಯಾಗಿದ್ದಾಳೆ. ಅಲ್ಲದೆ ಬಹುತೇಕ ಸರ್ಕಾರೀ ಶಾಲೆಗಳಲ್ಲಿ ವಿದ್ಯಾರ್ಥಿನಿಯರು 600ಕ್ಕೂ ಹೆಚ್ಚು ಅಂಕಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.


Aware others:

Leave a Reply

Your email address will not be published. Required fields are marked *

error: Content is protected !!