ಬೈಂದೂರಿನಲ್ಲಿ ಯಡಿಯೂರಪ್ಪ, ಅಣ್ಣಾಮಲೈ, ತಾರಾ ಬೃಹತ್ ರೋಡ್ ಶೋ

ಬೈಂದೂರು: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಪರವಾಗಿ ರಾಜ್ಯದ ಮಾಜೀ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ, ಚಿತ್ರನಟಿ ತಾರಾ ಸೇರಿದಂತೆ ಹಲವು ಗಣ್ಯರು ಇಂದು ಯಡ್ತೆರೆ ಕ್ರಾಸ್ ನಿಂದ ಬೈಂದೂರು ವರೆಗೆ ತೆರೆದ ವಾಹನದಲ್ಲಿ ಬೃಹತ್ ರೋಡ್ ಶೋ ನಡೆಸಿದರು.

ಈ ಸಂದರ್ಬ ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಉಡುಪಿ ಚಿಕ್ಕಮಗಳೂರು ಅಭ್ಯರ್ಥಿ ಕೋಟ ಶ್ರೀನಿವಾಸ್ ಪೂಜಾರಿ, ಮಂಗಳೂರು ಅಭ್ಯರ್ಥಿ ಬ್ರಿಜೇಶ್ ಚೌಟ, ಬಿ.ಎಸ್.ಸುರೇಶ್ ಶೆಟ್ಟಿ, ವೆಂಕಟೇಶ್ ಕಿಣಿ, ಜಯಾನಂದ ಹೋಬಳಿದಾರ್ ಮೊದಲಾದವರು ಇದ್ದರು. ಇದೇ ಸಂದರ್ಭ ಬಿಜೆಪಿಯ ಕಾರ್ಯಕರ್ತರು ಬೈಕ್ ರ್ಯಾಲಿ ಮೂಲಕ ರೋಡ್ ಶೋಗೆ ಮೆರುಗು ನೀಡಿದರು.

ಯಡ್ತರೆ ಜಂಕ್ಷನ್ ಗೆ ಗಣ್ಯರು ಆಗಮಿಸಲಿದ್ದಾರೆ. ಹೈವೆಯಿಂದ ಹೊಸ ಬಸ್ ನಿಲ್ದಾಣದವರೆಗೆ, ಬಿಜೆಪಿ ಕಚೇರಿ ಸರ್ವಿಸ್ ರಸ್ತೆಯಿಂದ ಅಂಡರ್ ಪಾಸ್ ವರೆಗೆ, ಅಂಡರ್ ಪಾಸ್ ನಿಂದ ನ್ಯಾಷನಲ್ ಬೇಕರಿ, ಕಾಲೇಜು ಮಾರ್ಗ, ಬೈಂದೂರಿನಿಂದ ಉಪ್ಪುಂದದ ಕಡೆಗೆ ಸಾಗಿತು. ಬಳಿಕ ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಿಂದ ಅಮ್ಮನವರ ತೊಪ್ಲು, ಮಡಿಕಲ್ ಮಾರ್ಕೆಟ್ ವರೆಗೂ ರೋಡ್ ಶೋ ಸಾಗಿಬಂತು.
ಮಧ್ಯಾಹ್ನ ಚಿತ್ತೂರು, ವಂಡ್ಸೆ, ನೇರಳಕಟ್ಟೆ, ಹಟ್ಟಿಯಂಗಡಿ, ತಲ್ಲೂರು, ಸಂಜೆ ತ್ರಾಸಿ, ಗುಜ್ಜಾಡಿ ಹಾಗೂ ರಾತ್ರಿ ಗಂಗೊಳ್ಳಿಯಲ್ಲಿ ರೋಡ್ ಶೋ ಸಮಾರೋಪಗೊಳ್ಳಲಿದೆ.
