BlogHighlightsLocal newsNational NewsOthersPoliticsState newsTrending

ದಕ್ಷಿಣದ ಕೊಲ್ಲೂರಿನಲ್ಲಿ ಟೆಂಪಲ್ ಕಾರೀಡಾರ್- ಅಣ್ಣಾಮಲೈ

Aware others:

ಬೈಂದೂರು: ದಕ್ಷಿಣ ಭಾರತದಲ್ಲಿ ಟೆಂಪಲ್ ಕಾರೀಡಾರ್ ಗೆ ಆದ್ಯತೆ ನೀಡುತ್ತಿದ್ದೇವೆ. ಈಗಾಗಲೇ ಕಾಶೀ-ವಾರಣಸಿ, ಉಜ್ಜನಿ, ಅಯೋಧ್ಯೆ ಕಾರೀಡಾರ್ ಆಗಿದೆ. ಅದೇ ರೀತಿಯಲ್ಲಿ ತಮಿಳುನಾಡಿನಲ್ಲಿ ತಿರುಅಣ್ಣಾಾಮಲೈ ಕಾರಿಡಾರ್ ಮಾಡುವುದಾಗಿ ನಾವು ಹೇಳಿದ್ದೇವೆ. ಕರ್ನಾಟಕದಲ್ಲಿ ಮೂಕಾಂಬಿಕಾ ಕಾರೀಡಾರ್ ಮಾಡುವ ಸಮಯ ಬಂದಿದೆ ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಹೇಳಿದ್ದಾರೆ.

ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ  ಮೋದಿಯವರನ್ನು ಇಲ್ಲಿಗೆ  ಕರೆದುಕೊಂಡು ಬಂದು, ದೇವಿಯ ದರ್ಶನ ಪಡೆಯಲಿದ್ದಾರೆ. ಕೊಲ್ಲೂರಿನಲ್ಲಿ ಮೂಕಾಂಬಿಕಾ ಕಾರೀಡಾರ್ ಆಗಿಯೇ ಆಗಲಿದೆ. ಈ ಬಗ್ಗೆ ಸ್ಪಷ್ಟ ರೂಪುರೇಷೆ ನಮ್ಮ ಬಳಿಯಿದೆ. ಬೈಂದೂರಿನಿಂದಲೇ 1 ಲಕ್ಷಕ್ಕೂಅಧಿಕ ಲೀಡ್ ನೀಡುವ ವಿಶ್ವಾಸ ವ್ಯಕ್ತವಾಗಿದೆ. ಮೂಕಾಂಬಿಕಾ ಕಾರೀಡಾರ್ ಆದರೆ ಬೈಂದೂರು ಮತ್ತು ಕೊಲ್ಲೂರು ಕ್ಷೇತ್ರ ಅಂತಾರಾಷ್ಟ್ರೀಯ ಮನ್ನಣೆ ಪಡೆಯಲಿದೆ ಎಂದರು. 

ಶಿವಮೊಗ್ಗ ಕ್ಷೇತ್ರದಲ್ಲಿ ರಾಘವೇಂದ್ರ ಅವರು 3 ಲಕ್ಷಕ್ಕೂ ಅಧಿಕ ಅಂತರದಲ್ಲಿ ಜಯಿಸಲಿದ್ದಾರೆ. ಕಾಂಗ್ರೆಸ್ ನವರು  ಹತಾಶೆಯಿಂದ ರಾಹುಲ್‌ಗಾಂಧಿಯವರನ್ನು ಶಿವಮೊಗ್ಗಕ್ಕೆ ಕರೆಸಿದ್ದಾರೆ. ಸಮಾರಂಭದಲ್ಲಿ ಏನೇನಾಗಿದೆ ಎಂಬುದು ಎಲ್ಲರಿಗೂ ತಿಳಿದಿದೆ ಮತ್ತು ಕಾಂಗ್ರೆಸ್ ಎಷ್ಟು ಅಸಂಘಟಿತವಾಗಿದೆ ಎಂಬುದು ತಿಳಿಯುತ್ತದೆ. ಮತದಾರರು ಬಿಜೆಪಿ ಜತೆಗೆ ಇದ್ದಾರೆ. ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಿತ್ ಶಾ ಅವರು ಈಗಾಗಲೇ ಸ್ಪಷ್ಟತೆ ನೀಡಿದ್ದಾರೆ ಎಂದರು.


Aware others:

Leave a Reply

Your email address will not be published. Required fields are marked *

error: Content is protected !!