BlogHighlightsLocal newsNational NewsOthersPoliticsState newsTop StoriesTrending

ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಪೂಜಾರಿ ತವರಿನಲ್ಲಿ ನೋಟ ಅಭಿಯಾನ!?

Aware others:

ಕುಂದಾಪುರ: ಕುತೂಹಲ ಕೆರಳಿಸಿರುವ ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ಪ್ರಕ್ರಿಯೆ ಇಂದು ಬೆಳಗ್ಗೆಯಿಂದಲೇ ಆರಂಭಗೊಂಡಿದ್ದು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ್ ಪೂಜಾರಿಯವರ ತವರೂರು ಕೋಟ ಪಡುಕೆರೆಯಲ್ಲಿ ನೋಟಾ ಅಭಿಯಾನ ಚುರುಕುಗೊಂಡಿದೆ. 

ಧರ್ಮಸ್ಥಳದಲ್ಲಿ ಅತ್ಯಾಚಾರಕ್ಕೊಳಗಾಗಿ ಹತ್ಯೆಯಾದ ಕುಮಾರಿ ಸೌಜನ್ಯ ಪರ ನ್ಯಾಯಕ್ಕಾಗಿ ಮಹೇಶ್ ಶೆಟ್ಟಿ ತಿಮರೋಡಿ ನೇತೃತ್ವದ ತಂಡ ನೋಟ ಅಭಿಯಾನ ಆರಂಭಿಸಿದ್ದು, ಈ ಹಿಂದೆ ಸೌಜನ್ಯ ಪರ ಹೋರಾಟದಲ್ಲಿ ನಿರತರಾಗಿದ್ದ ದಿನೇಶ್ ಗಾಣಿಗ ಕೋಟ ಅವರ ನೇತೃತ್ವದಲ್ಲಿ ಕೋಟದಲ್ಲಿ ನೋಟಾ ಅಭಿಯಾನ ನಡೆಯಿತು.

ಈ ಸಂದರ್ಭ ಮಾತನಾಡಿದ ನೋಟ ಅಭಿಯಾನದ ಸಂಚಾಲಕ ದಿನೇಶ್ ಗಾಣಿಗ ಅವರು, ಧರ್ಮಸ್ಥಳದಲ್ಲಿ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳು ತನಿಖೆ ವಿಳಂಬ ನೀತಿಯಿಂದ ಅನ್ಯಾಯಕ್ಕೊಳ್ಳಗಾದ ನತದೃಷ್ಟರಿಗೆ ನ್ಯಾಯ ದೊರಕಿಸಿ ಕೊಡುವಂತೆ ಹಲವು ಹೋರಾಟಗಳನ್ನು ನಡೆಸಲಾಗಿದೆ. ಆದರೆ ಇದುವರೆಗೆ ಆಡಳಿತ ಜನಪ್ರತಿನಿಧಿಗಳಾಗಲಿ ಸರ್ಕಾರವಾಗಲಿ, ತಲೆ ಕೆಡಿಸಿಕೊಂಡಿಲ್ಲ. ಈ ಹಿನ್ನೆಲೆಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ನೇತೃತ್ವದ ನೋಟ ಅಭಿಯಾನ ಚುರುಕುಗೊಂಡಿದ್ದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದೂವರೆ ಲಕ್ಷ ನೋಟಾ ಅಭಿಯಾನ ನಡೆಸಲಾಗುತ್ತದೆ. ಅದೇ ರೀತಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಕನಿಷ್ಠ 50 ಸಾವಿರ ನೋಟಾ ಮತಗಳನ್ನು ಚಲಾಯಿಸುವಂತೆ ಅಭಿಯಾನ ನಡೆಸಲಾಗುತ್ತಿದೆ. ಇದು ಜಗತ್ತಿನಲ್ಲಿಯೇ ಅತೀ ದೊಡ್ಡ ನೋಟಾ ಅಭಿಯಾನವಾಗಲಿದೆ ಎಂದ ಅವರು, ಆ ಮೂಲಕ ಅನ್ಯಾಯಕ್ಕೊಳಗಾದ ಸೌಜನ್ಯಳಿಗೆ ಹಾಗೂ ಅವರ ಕುಟುಂಬಕ್ಕೆ ನ್ಯಾಯ ದೊರಕಿಸಿ ಕೊಡುವಂತೆ ಈ ಮೂಲಕ ಹೋರಾಟ ನಡೆಸಲಾಗುತ್ತಿದೆ ಎಂದರು.

ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ 👇

ದಿನೇಶ್ ಗಾಣಿಗ ನೋಟಾ ಅಭಿಯಾನದಲ್ಲಿ ಪಾಲ್ಗೊಂಡರು

Aware others:

Leave a Reply

Your email address will not be published. Required fields are marked *

error: Content is protected !!