Local newsBlogEducationOthersTop StoriesTrending

ಅಂಬೇಡ್ಕರ್ ಗೆ ಅವಮಾನ: ಶಿಕ್ಷಣ ಸಂಯೋಜಕನ ವಿರುದ್ಧ ಆಕ್ರೋಶ – ಕೆಲವು ಅಧಿಕಾರಿಗಳೇ ಗೈರು!?

Aware others:

ಬೈಂದೂರು: ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬ ಅಂಬೇಡ್ಕರ್ ಜಯಂತಿ ಆಚರಿಸುತ್ತಿರುವಾಗಲೇ‌, ಬಿಇಓರವರು ಅಂಬೇಡ್ಕರ್ ಬಗ್ಗೆ ಮಾತನಾಡುತ್ತಿರುವಾಗಲೇ ಮೊಬೈಲ್ ನಲ್ಲಿ ಮಾತನಾಡುತ್ತಾ ಅಂಬೇಡ್ಕರ್ ಗೆ ಅವಮಾನ ಮಾಡಿದ್ದಾರೆ ಎನ್ನಲಾದ ಫೋಟೋವೊಂದು ವೈರಲ್ಲಾದ ಬೆನ್ನಿಗೇ ಇದೀಗ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. 

ಬೈಂದೂರು ಕ್ಷೇತ್ರ ಶಿಕ್ಷಣ ಇಲಾಖೆಯ ಶಿಕ್ಷಣ ಸಂಯೋಜಕ (ಇಸಿಒ) ಆಗಿರುವ ಚಂದ್ರ ದೇವಾಡಿಗ ಎಂಬುವರೇ ಅಂಬೇಡ್ಕರ್ ಜಯಂತಿಗೆ ಅವಮಾನ ಮಾಡಿದ ಆರೋಪ‌ ಎದುರಿಸುತ್ತಿತುವವರು. 

ಬೆಳೆಯುವ ಮಕ್ಕಳನ್ನು ತಿದ್ದಿ ತೀಡಿ ಬುದ್ಧಿ ಹೇಳಿ ಸಮಾಜದ ಉನ್ನತ ಪ್ರಜೆಗಳನ್ನಾಗಿಸಬೇಕು ಎಂಬುದಾಗಿ ಪಣ ತೊಟ್ಟು ಶಿಕ್ಷಣ ಇಲಾಖೆಗೆ ಬರುವ ಇಂತಹಾ ಅಧಿಕಾರಿಗಳೇ‌ ಮೈ ಮರೆತು ಇಂತಹಾ ಬೇಜವಾಬ್ಧಾರಿತನ ಮೆರೆದರೆ ಮಕ್ಕಳು ಇದನ್ನು ಹೇಗೆ ಸ್ವೀಕರಿಸಬೇಕು ಎನ್ನುವುದು ಸಾರ್ವಜನಿಕರ ಪ್ರಶ್ನೆ.

ದುರಂತವೆಂದರೆ, ಇದೇ ಫೋಟೋಗಳನ್ನು ಅಧಿಕಾರಿಗಳು ನಿರ್ಲಜ್ಜೆಯಿಂದ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಶಿಕ್ಷಣ ಇಲಾಖೆಯೂ ಇದನ್ನು ನಿರ್ಲಕ್ಷ್ಯಮಾಡಿದೆ. ಇಷ್ಟೇ ಅಲ್ಲದೇ ಹೊಸದಾಗಿ ವರ್ಗಾವಣೆಯಾಗಿ ಬಂದಿರುವ ಬಿಇಒ ಕಚೇರಿಯ ಮ್ಯಾನೇಜರ್ ಮ್ಯಾನೇಜರ್ ಮತ್ತು ಬೈಂದೂರುನಲ್ಲಿರುವ ಲೀಲಾವತಿ, ನಿತಿನ್ ಕುಮಾರ್ ಶೆಟ್ಟಿ ಈ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ!. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ನಡೆದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮವೇ ಈ ಪರಿಸ್ಥಿತಿಗೆ ತಲುಪಿದರೆ ಇನ್ನು, ಶಾಲೆಗಳಲ್ಲಿ ಅಂಬೇಡ್ಕರ್ ಜಯಂತಿ ಎಷ್ಟರಮಟ್ಟಿಗೆ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಿರಬಹುದು ಎಂಬುದು ಸಾರ್ವಜನಿಕರ ಅನುಮಾನಕ್ಕೆ ಕಾರಣವಾಗಿದೆ. ರ್ಥಇನ್ನಾದರೂ ಶಿಕ್ಷಣ ಇಲಾಖೆ ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳುವುದೇ ಕಾದು ನೋಡಬೇಕಿದೆ.


Aware others:

Leave a Reply

Your email address will not be published. Required fields are marked *

error: Content is protected !!