ಹೈವೇನಲ್ಲಿ ಡೇಂಜರಸ್ ರೈಡ್ : ಸ್ಟಂಟ್ ಮಾಸ್ಟರ್ ಅಂದರ್
ಎಪ್ರಿಲ್ 10ರಂದು ತಡರಾತ್ರಿ ಹೈವೇನಲ್ಲಿ ಡೇಂಜರಸ್ ಬೈಕ್ ರೈಡ್ ಮೂಲಕ ಸಾಮಾಜಿಕ ಶಾಂತಿ ಕದಡಿದ ಆರೋಪಿಗಳ ಪೈಕಿ ಒಬ್ಬನನ್ನು ಬ್ರಹ್ಮಾವರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಂಧಿತ ಆರೋಪಿಯನ್ನು ಸ್ಟಂಟ್ ಮಾಸ್ಟರ್ ತನುಷ್ ಬೈಕಾಡಿ ಎಂದು ಗುರುತಿಸಲಾಗಿದ್ದು ಉಳಿದಿಬ್ಬರ ಪತ್ತೆಗೆ ತನಿಖೆ ಚುರುಕುಗೊಳಿಸಿದ್ದಾರೆ.
ಬ್ರಹ್ಮಾವರ ತಾಲೂಕಿನ ವಾರಂಬಳ್ಳಿ ಗ್ರಾಮದ ಮದರ್ ಪ್ಯಾಲೇಸ್ ಕಡೆಯಿಂದ ರೋಯಲ್ ಇನ್ ಹೋಟೆಲ್ ತನಕ ರಾ.ಹೆ. 66 ರಲ್ಲಿ ಅಪಾಯಕಾರಿ ಸ್ಥಿತಿಯಲ್ಲಿ ಸಾರ್ವಜನಿಕರಲ್ಲಿ ಭಯ ಹುಟ್ಟಿಸಿ, ಮಾನವ ಜೀವಕ್ಕೆ ಅಪಾಯವಾಗುವಂತೆ ಮೋಟಾರ್ ಬೈಕ್ ಓಡಿಸಿದ್ದ ವಿಡಿಯೋ ವೈರಲ್ ಆಗಿತ್ತು.
ಯೂಟ್ಯೂಬ್ ನಲ್ಲಿ ವಿಡಿಯೋ ನೋಡಲು ಇಲ್ಲಿ ಕ್ಲಿಕ್ಕಿಸಿ 👉
ಸಂಬಂಧಿಸಿದ ಸುದ್ಧಿಗಾಗಿ ಇಲ್ಲಿ ಕ್ಲಿಕ್ಕಿಸಿ https://vasthava.com/?p=1209
