AccidentBlogCrime newsHighlightsLocal newsOthersTrending

ಹೆದ್ದಾರಿ ದಾಟುತ್ತಿದ್ದಾಗ ಬುಲೆಟ್ ಡಿಕ್ಕಿ : ಮಹಿಳೆ ಸಾವು

Aware others:

ಹೆದ್ದಾರಿಯ ಆಚೆ‌ಬದಿಗಿರುವ ಮನೆಗೆ ಹಾಲು ಕೊಟ್ಟು ವಾಪಾಸು ಹೆದ್ದಾರಿ ದಾಟಿ ಬರುತ್ತಿದ್ದ ಮಹಿಳೆಗೆ ಬುಲೆಟ್ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಪಾದಾಚಾರಿ ಮಹಿಳೆ ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ಸಾವನ್ನಪ್ಪಿದ ಘಟನೆ ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ನಾವುಂದ ಮಸ್ಕಿ ಮಹಾಗಣಪತಿ ದೇವಸ್ಥಾನದ ಹತ್ತಿರ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ.

ಸಾಂದರ್ಭಿಕ ಚಿತ್ರ

ಇಲ್ಲಿನ ನಾವುಂದ ನಿವಾಸಿ ಶಾಂತಾ(53) ಎಂದು ಗುರುತಿಸಲಾಗಿದೆ. ಶಾಂತಾ ಇಲ್ಲಿನ ಶಕುಂತಲಾ ಎಂಬುವರ ಮನೆಗೆ ಹಾಲು ಕೊಟ್ಟು ಡಿವೈಡರ್ ದಾಟಿ ನಡೆದುಕೊಂಡು ಹೋಗುತ್ತಿದ್ದರು. ಇರ್ಫಾನ್ ಎಂಬಾತ ಹಿಮಾಲಯ ಬುಲೆಟ್ ನಲ್ಲಿ ಅತೀ ವೇಗವಾಗಿ ಬಂದು ಡಿಕ್ಲಿ ಹೊಡೆದಿದ್ದಾನೆ. ಇಬ್ಬರೂ ರಸ್ತೆಗೆ ಬಿದ್ದಿದ್ದು, ಶಾಂತಾ ಗಂಭೀರ ಗಾಯಗೊಂಡಿದ್ದರು. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Aware others:

Leave a Reply

Your email address will not be published. Required fields are marked *

error: Content is protected !!