BlogCulturalEducationEntertainmentFashionHighlightsHuman storiesLifestyleLocal newsOthersTop StoriesTrendingWomen Care

ಸಾವಿತ್ರಿ ಬಾ ಪುಲೆ ಭಾರತದ ಶಿಕ್ಷಣ  ಕ್ರಾಂತಿಗೆ ನಾಂದಿ ಹಾಡಿದವರು : ಡಾ. ಸಬಿತಾ ಗುಂಡ್ಮಿ

Aware others:

ಕುಂದಾಪುರ: ಇವತ್ತು ನನ್ನಂತಹ ತಳ ವರ್ಗದ ಮಹಿಳೆಯೊಬ್ಬಳು ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ  ಆಗಲು ಮತ್ತು ಸಮಾಜದ ಕೆಳಹಂತದ ಜನರ ಬಗ್ಗೆ ಅಧ್ಯಯನ ನಡೆಸಿ ಡಾಕ್ಟರೇಟ್ ಪದವಿ ಪಡೆಯಲು  ಹತ್ತೊಂಬತ್ತನೇ ಶತಮಾನದ ಕ್ರಾಂತಿಕಾರಿ ದಂಪತಿಗಳಾದ ಜ್ಯೋತಿಬಾ ಮತ್ತು ಸಾವಿತ್ರಿ ಬಾ ಫುಲೆಯಂತಹ ಸಮಾಜ ಸುಧಾರಕರೇ ಕಾರಣ ಎಂದು ಮಂಗಳೂರು ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಡಾ. ಸಬಿತಾ ಗುಂಡ್ಮಿ ಹೇಳಿದರು. ಅವರು ಕುಂದಾಪುರದ ಸಮುದಾಯ ಸಾಂಸ್ಕೃತಿಕ ಸಂಘಟನೆಯ ಆಶ್ರಯದಲ್ಲಿ  ಸಮಾಜ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಮೆಟ್ರಿಕ್ ನಂತರದ ಪರಿಶಿಷ್ಟ ಜಾತಿಯ  ವಿದ್ಯಾರ್ಥಿನಿಲಯದ ವಿದ್ಯಾರ್ಥಿನಿಯರಿಗೆ ನಡೆಸಿದ ಅಕ್ಷರದವ್ವ ಸಾವಿತ್ರಿಬಾ ಫುಲೆ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.

ಕುಂದಾಪುರ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ ವಾದ) ತಾಲೂಕು ಸಂಚಾಲಕರಾದ ರಾಜು ಬೆಟ್ಟಿನಮನೆ ಮಾತನಾಡಿ, ದಲಿತ ವರ್ಗಕ್ಕೆ ಧ್ವನಿ ನೀಡಿದ್ದೇ ಅಂದಿನ ಸಮಾಜ ಸುಧಾರಕರರಾದ  ಸಾವಿತ್ರಿ ಬಾಪುಲೆ, ಜ್ಯೋತಿಬಾಪುಲೆ, ಪೆರಿಯಾರ್ ಹಾಗೂ ಅಂಬೇಡ್ಕರ್ ಅವರು ನೀಡಿದ ಸಂವಿಧಾನ  ಎಂದರು. ಕುಂದಾಪುರ ಸಮುದಾಯದ ಅಧ್ಯಕ್ಷ ಡಾ.ಸದಾನಂದ ಬೈಂದೂರು ಅಧ್ಯಕ್ಷತೆ ವಹಿಸಿ  ಮಾತನಾಡಿ, ಸಮುದಾಯದ 50 ವರ್ಷಗಳ ಸಾಂಸ್ಕೃತಿಕ ಚಳುವಳಿಯು ಹಂತ ಹಂತವಾಗಿ ನಡೆದು ಬಂದ ದಾರಿಯನ್ನು ವಿವರಿಸಿದರು. ಆ ನಿಟ್ಟಿನಲ್ಲಿ ಪುಲೆ ದಂಪತಿಗಳ ಜೀವಪರ ಕಾಳಜಿಯನ್ನು ಶ್ಲಾಘಿಸಿದರು.

ವಿದ್ಯಾರ್ಥಿನಿ ಮೇಘನಾ ಅವರು ಡಾ. ಸಬಿತಾ ಗುಂಡ್ಮಿಯವರ ಪರಿಚಯ ಮಾಡಿದರು. ವಿದ್ಯಾರ್ಥಿನಿಲಯದ ಮೇಲ್ವಿಚಾರಕಿ ರಾಧಿಕಾ ರಾಣಿ, ಡಾ. ಹಯವದನ  ಉಪಾಧ್ಯ, ಡಾ. ದಿನೇಶ್ ಹೆಗ್ಡೆ, ಶೇಖರ  ಕೊಠಾರಿ, ದಿನಕರ ಕೆಂಜೂರು,  ವಾಸುದೇವ ಗಂಗೇರ, ಚಿನ್ನ ಗಂಗೇರ  ಪಾಲ್ಗೊಂಡರು. ವಿದ್ಯಾರ್ಥಿ ನಿಲಯದ ಮೆಟ್ರಿಕ್ ನಂತರದ ಪರಿಶಿಷ್ಟ ವರ್ಗದ ನೂರಕ್ಕೂ ಹೆಚ್ಚು ವಿದ್ಯಾರ್ಥಿನಿಯರು  ಹಾಗೂ ಕುಂದಾಪುರ ಸಮುದಾಯದ ಸದಸ್ಯರು  ಭಾಗವಹಿಸಿದ್ದರು. ಸಮುದಾಯದ ಸಂಗಾತಿ ರಮೇಶ ಗುಲ್ವಾಡಿ ಕಾರ್ಯಕ್ರಮ ನಿರ್ವಹಿಸಿದರು


Aware others:

Leave a Reply

Your email address will not be published. Required fields are marked *

error: Content is protected !!