Sunday, August 30, 2026
Latest:
BlogCulturalEconomyEducationEntertainmentFashionHighlightsHuman storiesLifestyleLocal newsOthersSportsTop StoriesTrending

ಹೆಮ್ಮಾಡಿ: ಸೂಕ್ತ ವೇದಿಕೆಯ ಮೂಲಕ ಕಲಾ ಪ್ರತಿಭೆಗಳಿಂದಲೂ ಜೀವನ ರೂಪುಗೊಳ್ಳುವುದು ಸಾಧ್ಯ – ಚಿತ್ರನಟ ಪ್ರಕಾಶ್ ತುಮಿನಾಡು | ಜನತಾ ಪಿಯು ಕಾಲೇಜಿನಲ್ಲಿ ಜನತಾ ದಿಬ್ಬಣ 

Aware others:

ಕುಂದಾಪುರ: ಪ್ರತಿಭೆ ಎನ್ನುವುದು ಎಲ್ಲ ವಿದ್ಯಾರ್ಥಿಗಳಲ್ಲೂ ಸುಪ್ತವಾಗಿರುತ್ತದೆ. ಸರಿಯಾದ ವೇದಿಕೆ ಸಿಕ್ಕಾಗ ವಿದ್ಯಾರ್ಥಿಗಳ ಸುಪ್ರ ಪ್ರತಿಭೆ ತನ್ನ ಅಗಾಧತೆಯೊಂದಿಗೆ ತೆರೆದುಕೊಳ್ಳುತ್ತದೆ. ಹೆಮ್ಮಾಡಿಯ ಜನತಾ ಪಿಯು ಕಾಲೇಜು ಅಂತಹಾ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಒದಗಿಸುತ್ತಿರುವುದು ಶ್ಲಾಘನೀಯ ಎಂದು ವಿ ವಿ ವಿ ಮಂಡಳಿ.ರಿ.ಹೆಮ್ಮಾಡಿ ಇದರ ಅಧ್ಯಕ್ಷರು ಹಾಗೂ ಮಾಜಿ ಶಾಸಕ ಗೋಪಾಲ ಪೂಜಾರಿ ಹೇಳಿದರು.

ಅವರು ಹೆಮ್ಮಾಡಿ ಜನತಾ ಪಿಯು ಕಾಲೇಜಿನಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ ಜನತಾ ದಿಬ್ಬಣ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ವಿದ್ಯಾರ್ಥಿಗಳ ಶ್ರಮ, ಉಪನ್ಯಾಸಕರು ಪ್ರಾಂಶುಪಾಲರ ಪ್ರೋತ್ಸಾಹದಿಂದ ಇಂದು ಜನತಾ ಪಿಯು ಕಾಲೇಜ್ ರಾಜ್ಯ ಮಟ್ಟದಲ್ಲಿ ಶೈಕ್ಷಣಿಕವಾಗಿ ಗುರುತಿಸಿಕೊಂಡಿದೆ ಎಂದರು.

ಚಿತ್ರ ನಟ ಪ್ರಕಾಶ್ ತುಮಿನಾಡು ಮಾತನಾಡಿ ಪ್ರತಿಭೆಗೆ ಇರುವ ಸೌಂದರ್ಯ ಎಲ್ಲೂ ಇರುವುದಿಲ್ಲ. ಪ್ರತಿಭೆಗೆ ಅಂತ ಶಕ್ತಿ ಇದೆ. ವಿದ್ಯೆಯ ಜೊತೆಗೆ ವಿನಯವನ್ನು ರೂಪಿಸಿಕೊಂಡು ಹೆತ್ತವರನ್ನು ಗೌರವಿಸಿ. ಇಂದು ಕಲೆಯಿಂದ ಹಲವು ಕಡೆ ಜೀವನ ಕಟ್ಟಿಕೊಳ್ಳಲು ಅವಕಾಶ ಇದೆ. ಎಲ್ಲೆಲ್ಲಿ ನಿಮ್ನ ಪ್ರತಿಭೆ ಬೆಳಗಿಸಲು ವೇದಿಕೆ ಸಿಗುತ್ತದೋ ಸಿಕ್ಕಿದ ಅವಕಾಶ ಬಳಸಿಕೊಳ್ಳಿ ಎಂದು ಅವರು ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲ ಗಣೇಶ ಮೊಗವೀರ ಮಾತನಾಡಿ, ಶೈಕ್ಷಣಿಕ ಅವಕಾಶ ಎಲ್ಲ ಕಡೆ ಸಿಗುತ್ತದೆ‌. ಆದರೆ ಜನತಾ ವಿದ್ಯಾ ಸಂಸ್ಥೆಯಲ್ಲಿ ಕಲೆ ಸಾಹಿತ್ಯ ಸಾಂಸ್ಕೃತಿಕ ಕ್ಷೇತ್ರದಲ್ಲೂ ಅವಕಾಶ ಇದೆ. ಪಠ್ಯದ ಜೊತೆಗೆ ಸಹಪಠ್ಯ ಚಟುವಟಿಕೆಗಳಿಗೆ ನಾವು ಮೊದಲಿನಿಂದಲೂ ಅವಕಾಶ ಮಾಡಿಕೊಟ್ಟಿದ್ದೇವೆ. ವಿದ್ಯಾರ್ಥಿಗಳು ತಮ್ಮ ಸುಪ್ತ ಪ್ರತಿಭೆಗಳಿಗೆ ರೂಪ ನೀಡಿ ಮೂಲಕ ಭವಿಷ್ಯದಲ್ಲಿ ಸಾಧಕರಾಗಿ ರೂಪುಗೊಳ್ಳಬೇಕು ಎಂದರು.

ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ ನ ಮುಖ್ಯ ಶಿಕ್ಷಕಿ ದೀಪಿಕಾ ಆಚಾರ್ಯ.ಜನತಾ ಪ್ರೌಢ ಶಾಲೆ ಹೆಮ್ಮಾಡಿಯ ಪ್ರಭಾರ ಮುಖ್ಯ ಶಿಕ್ಷಕ ಜಗದೀಶ್ ಶೆಟ್ಟಿ ಉಪಸ್ಥಿತರಿದ್ದರು. ಪ್ರಥಮ ಮತ್ತು ದ್ವಿತೀಯ ಪಿಯುಸಿಯ ಆರು ತಂಡಗಳ ವಿದ್ಯಾರ್ಥಿಗಳು ವೈವಿಧ್ಯಮಯ ಕಾರ್ಯಕ್ರಮ ನೀಡಿ ಬಹುಮಾನ ಪಡೆದು ಸಂಭ್ರಮಿಸಿದರು. ಉಪ ಪ್ರಾಂಶುಪಾಲ ರಮೇಶ್ ಪೂಜಾರಿ ಸ್ವಾಗತಿಸಿ, ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ ನ ಮುಖ್ಯ ಶಿಕ್ಷಕಿ ದೀಪಿಕಾ ಆಚಾರ್ಯ ವಂದಿಸಿದರು. ಉಪನ್ಯಾಸಕ ಉದಯ ನಾಯ್ಕ ನಿರೂಪಿಸಿದರು


Aware others:

Leave a Reply

Your email address will not be published. Required fields are marked *

error: Content is protected !!