9 ರೂ 34 ಪೈಸೆ ಸಾಲಕ್ಕಾಗಿ ಬೆನ್ನುಬಿದ್ದ ಬ್ಯಾಂಕ್ಗೆ ಚಳಿ ಬಿಡಿಸಿದ ಗ್ರಾಹಕ
ಹಾಸನ: ಜಿಲ್ಲೆಯ ಸಕಲೇಶಪುರದಲ್ಲಿರುವ ಕೆನರಾ ಬ್ಯಾಂಕ್ ವಿರುದ್ಧ ಹಳೆ ಗ್ರಾಹಕರೊಬ್ಬರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 15-20 ವರ್ಷಗಳಿಂದ ಬ್ಯಾಂಕಿನ ಗ್ರಾಹಕರಾಗಿರುವ ಮತ್ತು ಬೆಳೆ ಸಾಲಗಳಂತಹ ವ್ಯವಹಾರ ಮಾಡುತ್ತಿರುವ ರೈತನಿಗೆ, ಬ್ಯಾಂಕ್‌ನಿಂದ 9 ರೂಪಾಯಿ 34 ಪೈಸೆ ಬಾಕಿ ಸಾಲ ಪಾವತಿಸುವಂತೆ ಬೆನ್ನುಬಿದ್ದಿದೆ.

ಇದೀಗ ಹತ್ತು ರೂ ಲೋನ್ ಕಟ್ಟಿರುವ ಗ್ರಾಹಕ ಚೊಕ್ಕಣ್ಣ ಗೌಡ 66 ಪೈಸೆ ವಾಪಸ್ ನೀಡುವಂತೆ ಪಟ್ಟು ಹಿಡಿದಿದ್ದಾರೆ. ರಸಿದಿಯಲ್ಲಿ 9 ರೂ 34 ಪೈಸೆ ಉಲ್ಲೇಖಿಸಿ 66 ಪೈಸೆ ವಾಪಸ್ ಕೊಟ್ಟಿಲ್ಲ ಎಂದು ಪಟ್ಟುಹಿಡಿದಿದ್ದಾರೆ. ಸಾವಿರಾರು ಕೋಟಿ ಸಾಲ ಮಾಡಿ ಊರು ಬಿಟ್ಟವರ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ, ಸಾಲ ಮಾಡಿ ವಾಪಸ್ ಕಟ್ಟುವ ಬಡ ರೈತರಿಗೆ ತೊಂದರೆ ಕೊಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
