ಹೈವೇ 66ರಲ್ಲಿ ಡೇಂಜರಸ್ ರೈಡ್ : ಅಪರಿಚಿತರ ವಿರುದ್ಧ ಎಫೈಆರ್ ಹಾಕಿದ ಬ್ರಹ್ಮಾವರ ಪೊಲೀಸ್
ಬ್ರಹ್ಮಾವರ: ಅಪರಿಚಿತ ಮೂವರು ಯುವಕರು ಅಪಾಯಕಾರಿ ರೀತಿಯಲ್ಲಿ ಬೈಕ್ ರೈಡ್ ಮಾಡಿದ್ದರ ವೀಡಿಯೋ ವೈರಲ್ ಆದ ಪರಿಣಾಮ ಬ್ರಹ್ಮಾವರ ಪೊಲೀಸರು ಅಪರಿಚಿತ ಯುವಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇಲ್ಲಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಎಪ್ರಿಲ್ 10 ರಾತ್ರಿ 11.30 ಗಂಟೆಗೆ ಬ್ರಹ್ಮಾವರ ಮದರ್ ಪ್ಯಾಲೇಸ್ ಕಡೆಯಿಂದ ರೋಯಲ್ ಇನ್ ಹೋಟೆಲ್ ತನಕ ನಂಬರ್ ಪ್ಲೇಟ್ ಇಲ್ಲದ ಮೋಟಾರು ಸೈಕಲ್ ನಲ್ಲಿ ಹೆಲ್ಮೇಟ್ ಧರಿಸದೇ ಅತೀವೇಗ ಹಾಗೂ ಅಜಾಗರೂಕತೆಯಿಂದ ಮೋಟಾರು ಸೈಕಲ್‌ನ್ನು ಅಡ್ಡಾದಿಡ್ಡಿಯಾಗಿ, ಬೈಕ್ ಸ್ಟ್ಯಾಂಡ್‌ನ್ನು ಥಾರು ರಸ್ತೆಗೆ ಒತ್ತಿಕೊಂಡು ಬೆಂಕಿ ಬರುವ ರೀತಿಯಲ್ಲಿ ಸವಾರಿ ಮಾಡಿ ಜನರಿಗೆ ಭಯ ಹುಟ್ಟಿಸಿದ್ದಾರೆ ಎನ್ನುವ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು.
ವಿಡಿಯೋ ವೈರಲ್ಲಾದ ಬೆನ್ನಿಗೇ ಘಟನೆಯ ಗಂಭೀರತೆಯನ್ನು ಅರಿತ ಬ್ರಹ್ಮಾವರ ಪೊಲೀಸರು ಅಪರಿಚಿತ ಬೈಕ್ ಸವಾರರ ವಿರುದ್ಧ ಎಫೈಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.