ಕಳೆದುಹೋದ ಫೋನ್ ಗಳ ಪತ್ತೆಹಚ್ಚಿದ ಕುಂದಾಪುರ ಪೊಲೀಸ್ – ಇಂದು ಹಸ್ತಾಂತರ
ಕುಂದಾಪುರ: ಕಳೆದ ಜನವರಿಯಿಂದ ಮಾರ್ಚ್ ವರೆಗೆ ಕುಂದಾಪುರ ಉಪವಿಭಾಗ ವ್ಯಾಪ್ತಿಯಲ್ಲಿ ಕಳೆದುಕೊಂಡಿದ್ದ ಫೋನ್ ಗಳ ಪೈಕಿ 13 ಫೋನ್ ಗಳನ್ನು ಉಡುಪಿ ಜಿಲ್ಲಾ ಪೊಲೀಸರು ಪತ್ತೆ ಹಚ್ಚಿದ್ದು, ಎಪ್ರಿಲ್ 11ರಂದು ಮಾಲಿಕರುಗಳಿಗೆ ಹಸ್ತಾಂತರ ಮಾಡಲಿದ್ದಾರೆ. ಪತ್ತೆ ಹಚ್ಚಲಾದ 13 ಫೋನ್ ಗಳ ಒಟ್ಟು ಮೌಲ್ಯವನ್ನು 1,30,000 ರೂ ಎಂದು ಅಂದಾಜಿಸಲಾಗಿದೆ.
ಸಾರ್ವಜನಿಕರು ಕಳೆದುಕೊಂಡಿರುವ ಒಟ್ಟು 13 ಮೊಬೈಲ್ ಫೋನ್ ಗಳನ್ನು ಕುಂದಾಪುರ ಪೊಲೀಸರು CEIR Portal ಮೂಲಕ ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ.
ಸಾರ್ವಜನಿಕರು ಕಳೆದುಕೊಂಡ ಮೊಬೈಲ್ ಫೋನ್ ಗಳನ್ನು CEIR Portal (Central Equipment Identity Register) ನಲ್ಲಿ ನಮೂದಿಸಿದ್ದಲ್ಲಿ ಪೊಲೀಸರಿಗೆ ಪತ್ತೆ ಮಾಡಲು ಅನುಕೂಲವಾಗುತ್ತದೆ. ಅಲ್ಲದೇ ಸಾರ್ವಜನಿಕರು ಕಳೆದುಕೊಂಡ ಮೊಬೈಲ್ ಫೋನ್ಗಳ ದುರ್ಬಳಕೆಯನ್ನು ತಡೆಗಟ್ಟಲು ಸಹಕಾರಿಯಾಗುತ್ತದೆ. ಆದುದರಿಂದ ಸಾರ್ವಜನಿಕರು ಕಳೆದುಕೊಂಡ ಮೊಬೈಲ್ ಫೋನ್ಗಳ ವಿವರಗಳನ್ನು CEIR Portal ನಲ್ಲಿ ದಾಖಲಿಸುವಂತೆ ಉಡುಪಿ ಎಸ್ಪಿ ಡಾ. ಅರುಣ್ ಕೆ ಐಪಿಎಸ್ ತಿಳಿಸಿದ್ದಾರೆ.

ಕುಂದಾಪುರ ಪೊಲೀಸ್ ಠಾಣೆಯಲ್ಲಿ ಈವರೆಗೆ ಒಟ್ಟು 53 ಮೊಬೈಲ್ಗಳನ್ನು CEIR ತಂತ್ರಾಂಶದ ಮೂಲಕ ಪತ್ತೆಹಚ್ಚಿ ಅದರ ಮಾಲೀಕರಿಗೆ ಈಗಾಗಲೇ ನೀಡಲಾಗಿದೆ.
ಇಡೀ ಕಾರ್ಯಾಚರಣೆ ಉಡುಪಿ ಎಸ್ಪಿ ಡಾ. ಅರುಣ್ ಕೆ ಮಾರ್ಗದರ್ಶನದಲ್ಲಿ ಎಡಿಷನಲ್ ಎಸ್ಪಿ ಸಿದ್ದಲಿಂಗಪ್ಪ, ಹಾಗೂ ಪರಮೇಶ್ವರ ಹೆಗಡೆ ಮತ್ತು ಕುಂದಾಪುರ ಡಿವೈಎಸ್ಪಿ ಬೆಳ್ಳಿಯಪ್ಪರವರ ನಿರ್ದೇಶನದಂತೆ ಕುಂದಾಪುರ ಸರ್ಕಲ್ ಇನ್ ಸ್ಪೆಕ್ಟರ್ ಯು.ಬಿ. ನಂದಕುಮಾರ್ರವರ ನೇತೃತ್ವದಲ್ಲಿ ಎಸೈ ವಿನಯ್ ಎಂ ಕೊರ್ಲಹಳ್ಳಿ, ಪ್ರಸಾದ್ ಕುಮಾರ್ ಕೆ. ಹಾಗೂ ಸಿಬ್ಬಂದಿಯವರಾದ ಸಿದ್ದಪ್ಪ ಸಕನಳ್ಳಿ, ಮಾರುತಿ ನಾಯ್ಕ ತಾಂತ್ರಿಕ ಸಿಬ್ಬಂದಿ ಅಶ್ವಿನ್ ಕುಮಾರ್ ತಂಡ ನಡೆಸುತ್ತಿದೆ.