BlogCulturalEconomyEducationEntertainmentFashionGovernmentHighlightsHuman storiesLifestyleLocal newsNational NewsOthersState newsTop StoriesTrending

ಚಿತ್ತೂರು: ಹಯಾತುಲ್ ಇಸ್ಲಾಂ ಅರೇಬಿಕ್ ಸ್ಕೂಲ್ ನಲ್ಲಿ 80ನೇ ಸ್ವಾತಂತ್ರ್ಯೋತ್ಸವ

Aware others:

ಕುಂದಾಪುರ: ಇಲ್ಲಿನ ಚಿತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಹಯಾತುಲ್ ಇಸ್ಲಾಂ ಅರೇಬಿಕ್ ಸ್ಕೂಲ್ ನಲ್ಲಿ 80ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ನಡೆಯಿತು. ಸ್ಥಳೀಯ ವೈದ್ಯ, ಪರಿಸರ ಪ್ರೇಮಿ ಡಾ. ಅತುಲ್ ಕುಮಾರ್ ಶೆಟ್ಟಿ ಧ್ವಜಾರೋಹಣಗೈದರು. ಚಿತ್ತೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ರವಿರಾಜ್ ಶೆಟ್ಟಿ ಹಾಗೂ ತಾಲೂಕ ಪಂಚಾಯತ್ ಮಾಜಿ ಸದಸ್ಯ ಉದಯ ಜಿ ಪೂಜಾರಿ, ವಂಡ್ಸೆ  ಜುಮ್ಮಾ ಮಸೀದಿಯ ಖತೀಬ ಅಬ್ದುಲ್ ರಜಾಕ್ ಮುಸ್ಲಿಯರ್ ಶುಭ ಹಾರೈಸಿದರು. 

ರಿಕ್ಷಾ ಚಾಲಕ ಮಾಲಕ ಸಂಘದ ಗೌರವ ಅಧ್ಯಕ್ಷ  ಸುರೇಶ್ ಪೂಜಾರಿ, ಅರೇಬಿಕ್ ಸ್ಕೂಲ್ ಅಧ್ಯಕ್ಷರಾದ ಇಕ್ಬಾಲ್, ಮಾಜಿ ಅಧ್ಯಕ್ಷರುಗಳಾದ ಕೆ. ಅಬ್ದುಲ್ ರೆಹಮಾನ್,ಹಂಝ ಸಾಹೇಬ್, ಮೊಹಮ್ಮದ್ , ಸಮಿತಿಯ ಸದಸ್ಯರು ಹಾಗೂ ಪದಾಧಿಕಾರಿಗಳು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಹಕೀಮ್ ಉಸ್ತಾದ್ ಪ್ರತಿಜ್ಞಾವಿಧಿ ಭೋದಿಸಿದರು. ಅಬ್ದುಲ್ ಸಲಾಂ ಚಿತ್ತೂರು ಸ್ವಾಗತಿಸಿ ವಂದಿಸಿದರು.


Aware others:

Leave a Reply

Your email address will not be published. Required fields are marked *

error: Content is protected !!