BlogCulturalEconomyEducationEntertainmentFashionHighlightsHuman storiesLifestyleLocal newsOthersTop StoriesTrending

ಸತತ ಪರಿಶ್ರಮವೇ ಯಶಸ್ಸಿನ ಮೆಟ್ಟಿಲು -ಡಾ. ರಾಹುಲ್ ದೇವರಾಜ್

Aware others:

ಹೆಮ್ಮಾಡಿ:ವಿದ್ಯಾರ್ಥಿಗಳಿಗೆ ಕಲಿಯುವ ಛಲ ಇರಬೇಕು,ತಂದೆ ತಾಯಿ ಅವರಿಗೆ ಸಪೋರ್ಟ್ ಮಾಡಬೇಕು. ಮಕ್ಕಳ ಒಳ್ಳೆಯ ಹವ್ಯಾಸಗಳಿಗೆ ಸಕರಾತ್ಮಕವಾದ ಅವಕಾಶ ಕಲ್ಪಿಸಿಕೊಡಬೇಕು ಆಗ ಮಾತ್ರ ಮಕ್ಕಳು ಉತ್ತಮ ವ್ಯಕ್ತಿಗಳಾಗಿ ರೂಪುಗೊಳುತ್ತಾರೆ ಎಂದು ಕನ್ನಡದ ಜನಪ್ರಿಯ ಪ್ರೇರಕ ಭಾಷಣಕಾರರಾದ ಡಾ. ರಾಹುಲ್ ದೇವರಾಜ್ ಹೇಳಿದರು.

ಶುಕ್ರವಾರ ಜನತಾ ಪದವಿ ಪೂರ್ವ ಕಾಲೇಜ್ ಹೆಮ್ಮಾಡಿಯ ಪ್ರಥಮ ಪಿಯು ಮತ್ತು ಎಸ್ಎಸ್ ಎಲ್ ಸಿ ವಿದ್ಯಾರ್ಥಿಗಳ ಪೋಷಕರ ಸಭೆ ಜನತಾ ದಿಕ್ಸೂಚಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು
ಮಕ್ಕಳ ಜೀವನ ರಥ ಮುನ್ನೆಡೆಯಲು ಪೋಷಕರು ಶಿಕ್ಷಕರು ಇಬ್ಬರ ಪಾತ್ರ ಮುಖ್ಯವಾದುದು.ಪೋಷಕರು ಮನೆಯಲ್ಲಿ ತಮ್ಮ ಮಕ್ಕಳಿಗೆ ಓದುವ ವಾತಾವರಣ ಕಲ್ಪಿಸಿಕೊಡಬೇಕು, ಇಂದು ಮಕ್ಕಳು ಮತ್ತು ಹೆತ್ತವರ ಸಂಬಂಧದ ಮೌಲ್ಯ ಕಡಿಮೆಯಾಗುತ್ತಿದೆ . ಪೋಷಕರು ಮತ್ತು ಮಕ್ಕಳ ಸಂಬಂಧದ ಮೌಲ್ಯ ಜಾಸ್ತಿಯಾದಾಗ ಕಲಿಕೆ ಇನ್ನಷ್ಟು ಗಟ್ಟಿಯಾಗುತ್ತದೆ.ಮಕ್ಕಳು ನಾವು ಹೇಳಿದನ್ನು ಕೇಳುವುದಿಲ್ಲ ನಾವು ಮಾಡುದನ್ನು ಮಾಡುತ್ತಾರೆ ಎಂದು ಅವರು ಪ್ರೇರಣದಾಯಕ ಕಥೆಗಳ ಮೂಲಕ ತಿಳಿ ಹೇಳಿದರು.

ಜನತಾ ಸಮೂಹ ಸಂಸ್ಥೆಯ ಅಧ್ಯಕ್ಷರಾದ ಗಣೇಶ್ ಮೊಗವೀರ ಮಾತನಾಡಿ ನಾನು ಇಂದು ಇಷ್ಟು ಎತ್ತರಕ್ಕೆ ಏರಲು ಯಾವುದೇ ಅದೃಷ್ಟದ ಲಿಫ್ಟ್ ಇರಲಿಲ್ಲ, ನನ್ನ ಜೀವನದಲ್ಲಿ ನನಗಾದ ಸೋಲು, ಅವಮಾನ, ಹತಾಶೆಗಳೇ ಕಾರಣ, ಪ್ರತಿ ಸೋಲು ನನಗೆ ಹೊಸ ಪಾಠ ಕಲಿಸಿದೆ,ನಮ್ಮ ಜೀವನದಲ್ಲಿ ಕಠಿಣ ಪರಿಶ್ರಮ ಮತ್ತು ಸ್ಪಷ್ಟ ಗುರಿ ಇದ್ದರೆ ಏನನ್ನು ಸಾಧಿಸಬಹುದು ವಿದ್ಯಾರ್ಥಿಗಳು ಒಳ್ಳೆಯ ಗುರಿ ಇಟ್ಟು ಶೈಕ್ಷಣಿಕ ಸಾಧನೆ ಮಾಡಿ ಎಂದು ಹಾರೈಸಿದರು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ ಡಾ. ರಾಹುಲ್ ದೇವರಾಜ್ ಹಾಗೂ ಇತ್ತೀಚಿಗೆ ನಿವೃತ್ತರಾದ ಸಹೋದರ ಸಂಸ್ಥೆ ಜನತಾ ಅನುದಾನಿತ ಪ್ರೌಢ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ದೇವೇಂದ್ರ ನಾಯ್ಕ್ ಇವರನ್ನು ಸನ್ಮಾನಿಸಲಾಯಿತು.

ಕಾಲೇಜಿನ ಉಪಪ್ರಾಂಶುಪಾಲರಾದ ರಮೇಶ್ ಪೂಜಾರಿ ಸ್ವಾಗತಿಸಿ, ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ ಕಿರೀಮಂಜೇಶ್ವರದ ಮುಖ್ಯ ಶಿಕ್ಷಕಿ ದೀಪಿಕಾ ಆಚಾರ್ಯ ವಂದಿಸಿ, ಉಪನ್ಯಾಸರಾದ ಉದಯ್ ನಾಯ್ಕ ನಿರೂಪಿಸಿದರು.


Aware others:

Leave a Reply

Your email address will not be published. Required fields are marked *

error: Content is protected !!