ಕೋಟ: ಕ್ಯಾನ್ಸರ್ ಬಾಧಿತ ಮಾಧವ ಶೆಣೈ ಪಂಚವರ್ಣದಿಂದ 45ಸಾವಿರ ನೆರವು ಹಸ್ತಾಂತರ
ಕೋಟ: ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ಕೆ.ಎಂ.ಸಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಣೂರು ಪರಿಸರದ ಮಾಧವ ಶೆಣೈ ಅವರಿಗೆ ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಹಾಗೂ ದಾನಿಗಳ ಸಹಕಾರದೊಂದಿಗೆ ಒಟ್ಟುಗೂಡಿಸಿದ ಸುಮಾರು 45 ಸಾವಿರ ರೂಪಾಯಿಗಳ ನೆರವಿನ ಚೆಕ್ಕನ್ನು ಮುಂಬೈ ಒ.ಎನ್.ಜಿ.ಸಿ ಇದರ ನಿವೃತ್ತ ಅಧಿಕಾರಿ ಬನ್ನಾಡಿ ನಾರಾಯಣ ಆಚಾರ್ ಅವರು ಭಾನುವಾರ ಮಾಧವ ಶೆಣೈಯವರಿಗೆ ಹಸ್ತಾಂತರಿಸಿದರು.

ಈ ಸಂದರ್ಭ ಸಕಡ್ ಫೌಂಡೇಶನ್ ಮುಖ್ಯಸ್ಥ ಶ್ರೀಕಾಂತ್ ಶೆಣೈ, ಕೋಟ ಪಂಚಾಯತ್ ಮಾಜಿ ಸದಸ್ಯ ಎಂ.ಜಯರಾಮ ಶೆಟ್ಟಿ, ಪಂಚವರ್ಣ ಸಂಘಟನೆಯ ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಅಧ್ಯಕ್ಷ ಮನೋಹರ್ ಪೂಜಾರಿ, ಉಪಾಧ್ಯಕ್ಷ ದಿನೇಶ್ ಆಚಾರ್, ನಿಕಟಪೂರ್ವ ಅಧ್ಯಕ್ಷ ಅಜಿತ್ ಆಚಾರ್, ಮಹಿಳಾ ಅಧ್ಯಕ್ಷೆ ಲಲಿತಾ ಪೂಜಾರಿ, ಸಂಚಾಲಕಿ ಸುಜಾತ ಬಾಯರಿ ಮತ್ತಿತರರು ಇದ್ದರು.
