BlogEconomyEducationEntertainmentFashionHighlightsHuman storiesLifestyleLocal newsOthersTop StoriesTrending

ಕುಂದಾಪುರ: ಜೆಸಿಐ ಸಿಟಿಯ ವತಿಯಿಂದ ಶಾಲಾ ಕಿಟ್ ವಿತರಣೆ.

Aware others:

ಕುಂದಾಪುರ: ಜೆಸಿಐ ಸಿಟಿಯ ವತಿಯಿಂದ ಎಲ್ಐಸಿ ರಸ್ತೆಯಲ್ಲಿರುವ ಅಂಗನವಾಡಿ ಕೇಂದ್ರದ ವಿದ್ಯಾರ್ಥಿಗಳಿಗೆ  ಕುಂದಾಪುರದ ಪಾದುಕಾ ಲಯ ಇದರ ಮಾಲಕರಾದ ಮಹಮದ್ ಸಾಬೀರ್ ಕೊಡಮಾಡಿದ ಶಾಲಾ ಕಿಟ್ ಅನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.

ಸಂದರ್ಭದಲ್ಲಿ ಜೆಸಿಐ ಕುಂದಾಪುರ ಸಿಟಿ ಸ್ಥಾಪಕಧ್ಯಕ್ಷ ಹುಸೇನ್ ಹೈಕಾಡಿ ಮಾತನಾಡಿ, ರೀತಿಯ ಸಮಾಜ ಸೇವೆಯಿಂದ ಯಾರು ಶಿಕ್ಷಣದಿಂದ ವಂಚಿತರಾಗದೆ ವಿದ್ಯಾರ್ಥಿಗಳು ಹೆಚ್ಚು ಉತ್ಸಾಹದಿಂದ ಶಾಲೆಗೆ ಬರಲು ಸಾಧ್ಯವಾಗುತ್ತದೆ ಎಂದರು.

ಜೆಸಿಐ ಕುಂದಾಪುರ ಸಿಟಿಯ ಅಧ್ಯಕ್ಷ ಕಿರಣ್ ದೇವಾಡಿಗ, ಧಾನಿಗಳಾದ ಜೇಸಿ ಮೊಹಮ್ಮದ್ ಸಾಬೀರ್, ವಲಯ ಸಂಯೋಜಕ ರಾಘವೇಂದ್ರ ಕುಲಾಲ್, ಐಪಿಪಿ. ಯೂಸುಫ್ ಸಲೀಂ, ಸ್ಥಳೀಯ ಮುಖಂಡ ಚಂದ್ರ ಶೆಟ್ಟಿ, ಅಂಗನವಾಡಿ ಮೇಲ್ವಿಚಾರಕರು ಉಪಸ್ಥಿತರಿದ್ದರು.


Aware others:

Leave a Reply

Your email address will not be published. Required fields are marked *

error: Content is protected !!