ಹವಾಮಾನ ವೈಪರೀತ್ಯಕ್ಕೆ ಮನುಕುಲದ ನಿರ್ಲಕ್ಷ್ಯವೇ ಕಾರಣ – ಕೋಟ ಸಿ.ಎ.ಬ್ಯಾಂಕ್ ಅಧ್ಯಕ್ಷ ಡಾ.ಕೃಷ್ಣ ಕಾಂಚನ್
ಕೋಟ: ಪ್ರಸ್ತುತ ವಾತಾವರಣದ ವೈಪರೀತ್ಯ, ಹೆಚ್ಚುತ್ತಿರುವ ತಾಪಮಾನಕ್ಕೆ ಮನುಕುಲದ ನಿರ್ಲಕ್ಷ್ಯವೇ ಕಾರಣ. ಜಗತ್ತಿನಾದ್ಯಂತ ನಡೆಯುತ್ತಿರುವ ಪರಿಸರ ನಾಶದಿಂದಾಗಿ ಎಲ್ನೀನೋ ಎಂಬ ಉಷ್ಣಮಾರುತ ಸಂಕಷ್ಟವನ್ನು ತಂದೊಡ್ಡುತ್ತಿದೆ. ಪ್ರತಿಯೊಂದು ಭಾಗದಲ್ಲೂ ಪರಿಸರ ಉಳಿಸಿ ಬೆಳೆಸುವ ಕಾರ್ಯ ನಡೆದರೆ ಪ್ರಸ್ತುತ ಹಾಗೂ ಮುಂದಿನ ತಲೆಮಾರಿಗೆ ಸಹಕಾರಿಯಾಗಲಿದೆ ಎಂದು ಕೋಟದ ಸಹಕಾರಿ ವ್ಯವಸಾಯಕ ಸಂಘದ ಅಧ್ಯಕ್ಷ ಡಾ.ಕೃಷ್ಣ ಕಾಂಚನ್ ಹೇಳಿದ್ದಾರೆ. ಅವರು ಕೋಟದ ಸಹಕಾರಿ ವ್ಯವಸಾಯಿಕ ಸಂಘ, ಸಹಕಾರ ಇಲಾಖೆ ಉಡುಪಿ, ಜಿಲ್ಲಾ ಸಹಕಾರಿ ಯೂನಿಯನ್ ಸಂಯೋಜನೆಯೊಂದಿಗೆ ಸಹಕಾರಿ ಸಪ್ತಾಹದ ಅಂಗವಾಗಿ ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಗೀತಾನಂದ ಫೌಂಡೇಶನ್ ಮಣೂರು, ಪೇತ್ರಿ ಅನ್ನಪೂರ್ಣ ನರ್ಸರಿ ಇವರ ಸಹಯೋಗದೊಂದಿಗೆ 308ನೇ ಭಾನುವಾರದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಹಕಾರಿ ಹಸಿರು ಹೆಜ್ಜೆ ಅಂಗವಾಗಿ ಸಾಲಿಗ್ರಾಮ ರಾಷ್ಟ್ರೀಯ ಹೆದ್ದಾರಿ ಹಾಗೂ ಕೋಟ ಸಹಕಾರಿ ಸಂಘದ ವಠಾರದಲ್ಲಿ ಗಿಡ ನೆಡಲಾಯಿತು ಜಿಲ್ಲಾ ಸಹಕಾರಿ ಯೂನಿಯನ್ ಸಿಇಒ ಅನುಷಾ ಕೋಟ್ಯಾನ್ ಉದ್ಘಾಟಿಸಿದರು. ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಮನೋಹರ್ ಪೂಜಾರಿ,ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ,ಜಿಲ್ಲಾ ಸಹಕಾರಿ ಯೂನಿಯನ್ ಸಿಇಒ ಅನುಷಾ ಕೋಟ್ಯಾನ್ ಇವರುಗಳನ್ನು ಸನ್ಮಾನಿಸಲಾಯಿತು.

ಸಾಲಿಗ್ರಾಮ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗಿಡ ನಡುವ ಕಾರ್ಯಕ್ರಮದಲ್ಲಿ ಕೋಟ ಸಿ ಎ ಬ್ಯಾಂಕ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶರತ್ ಕುಮಾರ್ ಶೆಟ್ಟಿ, ಪತ್ರಿಕಾ ವಿತರಕ ನಾಗೇಶ್ ಶೆಣೈ, ಸಾಮಾಜಿಕ ಕಾರ್ಯಕರ್ತ ನಾಗರಾಜ್ ಗಾಣಿಗ, ಸಾಲಿಗ್ರಾಮ ದೇಗುಲದ ಟೃಸ್ಟಿ ತಾರಾನಾಥ ಹೊಳ್ಳ, ಕೋಟ ಸಿ ಎ ಬ್ಯಾಂಕ್ ನಿರ್ದೇಶಕ ಚಂದ್ರ ಪೂಜಾರಿ, ಪಾಂಡೇಶ್ವರ ಕಳಿಬೈಲು ಕೊರಗಜ್ಜ ದೈವಸ್ಥಾನದ ಧರ್ಮದರ್ಶಿ ಅಭಿಜಿತ್ ಪಾಂಡೇಶ್ವರ ಭಾಗಿಯಾದರು.

ಕೋಟ ಸಹಕಾರಿ ವ್ಯವಸಾಯಕ ಸಂಘದ ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ನಾಗರಾಜ್ ಹಂದೆ, ನಿರ್ದೇಶಕರಾದ ವಸಂತಿ ಎ ಪೂಜಾರಿ, ಪ್ರೇಮ ಮೆಂಡನ್, ರಂಜಿತ್ ಬಾರಿಕೆರೆ, ಚಂದ್ರ ಪೂಜಾರಿ, ರವೀಂದ್ರ ಕಾಮತ್, ಶೇಖರ್ ಮರಕಾಲ, ಮಾಜಿ ಸಿಇಓ ಶೋಭಾ ಶೆಟ್ಟಿ ಉಪಸ್ಥಿತರಿದ್ದರು.

ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶರತ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಪಂಚವರ್ಣ ಮಹಿಳಾ ಮಂಡಲದ ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್ ಪ್ರತಿಜ್ಞಾವಿಧಿ ಭೋದಿಸಿದರು. ಸಹಾಯಕ ಕಾರ್ಯನಿರ್ವಹಣಾಧಿಕಾರಿ ಸುಧಾಕರ್ ಕೆ ವಂದಿಸಿದರು. ಸಿಬ್ಬಂದಿ ಮಂಜುನಾಥ ನಿರೂಪಿಸಿದರು.
