BlogCrime newsGovernmentHighlightsHuman storiesLifestyleLocal newsOthersProtestState newsTop StoriesTrendingWomen Care

ಲಾಡ್ಜ್ ನಲ್ಲಿ ಅಪ್ರಾಪ್ತೆಯ ಅತ್ಯಾಚಾರ ನಡೆಸಿದ್ದನೆನ್ನಲಾದ ಎಸೈ ಬಂಧನ!

Aware others:

ಭಟ್ಕಳ: ವರ್ಗಾವಣೆಯಾಗಿ ಬಂದ ಕೆಲವೇ ತಿಂಗಳಲ್ಲಿ ಬಾಲಕಿಯೊಬ್ಬಳನ್ನು ಲಾಡ್ಜ್ ಗೆ ಕರೆದೊಯ್ದು ಅತ್ಯಾಚಾರ ನಡೆಸಿದ ಆರೋಪದಲ್ಲಿ ಮಂಕಿ ಪೊಲೀಸ್ ಠಾಣೆಯ ಎಸೈ ಅಭಿನಂಧನ ಗೌಡ ಎಂಬಾತನನ್ನು ಭಟ್ಕಳ ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಎಸೈ ಅಭಿನಂದನ ಗೌಡ ಕೆಲವು ದಿನಗಳ ಹಿಂದೆ 16 ವರ್ಷದ ಬಾಲಕಿಯನ್ನು ಪುಸಲಾಯಿಸಿ ಭಟ್ಕಳಕ್ಕೆ ಕರೆತಂದು ಲಾಡ್ಜ್‌ನಲ್ಲಿ ಅತ್ಯಾಚಾರ ನಡೆಸಿದ್ದಾರೆ ಎಂಬ ಸಂತ್ರಸ್ಥೆ ಬಾಲಕಿಯ ದೂರಿನ ಮೇಲೆ ಭಟ್ಕಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಈ ಕ್ರಮ ಕೈಗೊಂಡಿದ್ದಾರೆ ಎಮದು ತಿಳಿದು ಬಂದಿದೆ.

ರಾಮನಗರ ಜಿಲ್ಲೆಯ ಕನಕಪುರ ಮೂಲದ ಆರೋಪಿ ಎಸೈ ಅಭಿನಂದನ್ ಗೌಡ ಕೆಲವು ತಿಂಗಳ ಹಿಂದೆಯಷ್ಟೇ ಮಂಕಿ ಪೊಲೀಸ್ ಠಾಣೆಗೆ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಸಬ್ ಇನ್ ಸ್ಪೆಕ್ಟರ್ ಆಗಿ ವರ್ಗಾವಣೆಗೊಂಡಿದ್ದರು.

ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪೋಕ್ಸ್‌ (POCSO) ಕಾಯ್ದೆ ಸೇರಿದಂತೆ ಸಂಬಂಧಿತ ಕಾನೂನುಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಇತ್ತೀಚೆಗೆ ಕಾನೂನು ಸುವ್ಯವಸ್ಥೆ ಪಾಲಿಸಬೇಕಾದ ಪೊಲೀಸರೇ ಕಾನೂನು ಮುರಿದು ದೌರ್ಜನ್ಯ, ಅತ್ಯಾಚಾರ ನಡೆಸುತ್ತಿರುವ ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿರುವುದು ಸಮಾಜದಲ್ಲಿ ಆತಂಕ ಸೃಷ್ಟಿಸುತ್ತಿದೆ


Aware others:

Leave a Reply

Your email address will not be published. Required fields are marked *

error: Content is protected !!